ಬೆನ್ನು ಬೆನ್ನಿಗೆ ಪ್ರಮುಖ ಸಾವು! 2009 ರಲ್ಲೂ ನಡೆದಿತ್ತು ಇದೇ ಆಘಾತ
ಸೋಮವಾರ, 26 ನವೆಂಬರ್ 2018 (08:58 IST)
ಬೆಂಗಳೂರು: ಯಾಕೋ ಈ ನವಂಬರ್ ತಿಂಗಳು ಕರ್ನಾಟಕದ ಪಾಲಿಗೆ ಕರಾಳವಾಗಿ ಪರಿಣಮಿಸುತ್ತಿದೆ. ಮೊದಲು ಕೇಂದ್ರ ಸಚಿವ ಅನಂತ ಕುಮಾರ್ ಬಳಿಕ ಮಂಡ್ಯ ಬಸ್ ದುರಂತ, ಅದಾದ ಮೇಲೆ ನಟ ಅಂಬರೀಷ್ ಸಾವು.. ಹೀಗೆ ಸರಣಿ ಸಾವಿನ ನೋವಿನಲ್ಲಿ ಕರ್ನಾಟಕ ದುಃಖದ ಮಡುವಿನಲ್ಲಿದೆ.
ಒಂದು ಸಾವಿನ ನೋವು ಮರೆಯುವ ಮುನ್ನವೇ ಮತ್ತೊಂದು ಆಘಾತ ಬರುತ್ತಿರುವುದು ನಿಜಕ್ಕೂ ದುಃಖಕರ ಸಂಗತಿಯೇ ಸರಿ. ಆದರೆ ಹಿಂದೆ 2009 ರಲ್ಲಿ ವಿಷ್ಣುವರ್ಧನ್ ತೀರಿಕೊಂಡಾಗಲೂ ಇದೇ ರೀತಿ ಆಗಿತ್ತು.
2009 ರ ಡಿಸೆಂಬರ್ 29 ರಂದು ಕನ್ನಡದ ಖ್ಯಾತ ಗಾಯಕ ಸಿ ಅಶ್ವಥ್ ತೀರಿಕೊಂಡಿದ್ದರು. ಆ ನೋವು ಮರೆಯುವ ಮುನ್ನವೇ ಅಂದರೆ ಅದರ ಮರುದಿನವೇ ಸಾಹಸ ಸಿಂಹ ವಿಷ್ಣುವರ್ಧನ್ ಹಠಾತ್ ನಿಧನ ಕನ್ನಡಿಗರನ್ನು ತಲ್ಲಣಗೊಳಿಸಿತ್ತು.
ವಿಷ್ಣುವರ್ಧನ್ ತೀರಿಕೊಂಡು 15 ದಿನ ಕಳೆಯುವಷ್ಟರಲ್ಲಿ ಅಂದರೆ ಜನವರಿ 18 ರಂದು ನಾಗರಹಾವಿನ ಚಾಮಯ್ಯ ಮೇಸ್ಟ್ರು ಅಂದರೆ ನಟ ಕೆಎಸ್ ಅಶ್ವಥ್ ನಮ್ಮನ್ನಗಲಿದ್ದರು. ಈ ರೀತಿ ಮೂರು ಸಾವುಗಳು ಒಂದರ ಹಿಂದೊಂದರಂತೆ ಬಂದು ಅಂದೂ ನೋವು ತಂದಿತ್ತು. ಈಗ ಮತ್ತೊಮ್ಮೆ ಅಂತಹದ್ದೇ ಪರಿಸ್ಥಿತಿ ಬಂದಿದೆ. ಈ ನೋವು ಇಲ್ಲಿಗೇ ಮುಗಿಯಲಿ ಎಂಬುದೇ ಕನ್ನಡಿಗರ ಹಾರೈಕೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.