ಪಡಿತರ ಚೀಟಿಯಲ್ಲಿ ಹೊಸ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ತೆಗೆಯುವುದಕ್ಕೆ ಇಂದಿನಿಂದ ಅವಕಾಶ ನೀಡಲಾಗುತ್ತಿದೆ. ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ತಮ್ಮ ಮಕ್ಕಳು, ಮದುವೆಯಾಗಿ ಬಂದ ಹೆಣ್ಣು ಮಕ್ಕಳ ಹೆಸರು ಸೇರ್ಪಡೆಗೆ ಅವಕಾಶ ಸಿಗಲಿದೆ.
ತಿದ್ದುಪಡಿ ಎಲ್ಲಿ ಮಾಡಬೇಕು?
ಆಫ್ ಲೈನ್ ಮೂಲಕ ತಿದ್ದುಪಡಿ ಮಾಡುವವರು ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಎಪಿಎಲ್ ಕಾರ್ಡ್ ಪಡೆಯುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎಪಿಎಲ್ ಕಾರ್ಡ್ ಹೊಂದಿರುವವರು ತಿದ್ದುಪಡಿ ಮಾಡುವುದಿದ್ದರೆ ಆಹಾರ ಇಲಾಖೆ https://ahara.kar.nic.in/lpg/ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಏನೆಲ್ಲಾ ದಾಖಲೆಗಳು ಬೇಕು?
ಮಗುವಿನ ಹೆಸರು ಸೇರ್ಪಡೆಗೊಳಿಸಬೇಕಿದ್ದರೆ ಜನನ ಪ್ರಮಾಣ ಪತ್ರ
ಮಗುವಿನ ಪೋಷಕರ ಆಧಾರ್ ಕಾರ್ಡ್
ಹೆಂಡತಿಯ ಹೆಸರು ಸೇರ್ಪಡೆಗೆ ಆಕೆಯ ಆಧಾರ್ ಕಾರ್ಡ್, ಗಂಡನ ಮನೆಯ ಪಡಿತರ ಚೀಟಿ ಪ್ರತಿ
ಈ ದಾಖಲೆಗಳು ಇದ್ದರೆ ಆನ್ ಲೈನ್ ಮೂಲಕವೂ ನೀವೇ ಅರ್ಜಿ ಸಲ್ಲಿಸಬಹುದಾಗಿದೆ.