ಕರ್ನಾಟಕ ಶಿಕ್ಷಣ ನೀತಿಯಲ್ಲಿ ಭಾರೀ ಬದಲಾವಣೆ: ಹಿಂದಿಗೆ ಗೇಟ್ ಪಾಸ್

Krishnaveni K

ಶನಿವಾರ, 9 ಆಗಸ್ಟ್ 2025 (09:45 IST)
ಬೆಂಗಳೂರು: ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಇರುವ ತ್ರಿಭಾಷಾ ಸೂತ್ರ ಕೈ ಬಿಟ್ಟು ದ್ವಿಭಾಷಾ ನೀತಿ ಜಾರಿಗೊಳಿಸಬೇಕು ಎಂದು ಪ್ರೊ. ಸುಖದೇವ್ ಥೋರಟ್ ನೇತೃತ್ವದ ಸಮಿತಿ ಅಧ್ಯಯನ ವರದಿ ಶಿಫಾರಸ್ಸು ಮಾಡಿದೆ. ಇದನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಲಾಗಿದೆ.
 

2197 ಪುಟಗಳ ವರದಿ ಸಲ್ಲಿಕೆಯಾಗಿದೆ. 1ಎ ಮತ್ತು 1ಬಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ವರದಿ 580 ಪುಟಗಳಿವೆ. 2ಎ ಮತ್ತು 2ಬಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ  ವರದಿ 455 ಪುಟ, ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ 450 ಪುಟಗಳ ವರದಿಗಳಿವೆ.

ಈ ವರದಿಯಲ್ಲಿ 2 ವರ್ಷ ಪೂರ್ವ ಪ್ರಾಥಮಿಕ, 8 ವರ್ಷ ಪ್ರಾಥಮಿಕ ಮತ್ತು 4 ವರ್ಷ ಮಾಧ್ಯಮಿಕ ಶಿಕ್ಷಣಕ್ಕೆ ಶಿಫಾರಸ್ಸು ಮಾಡಲಾಗಿದೆ. ಎಲ್ಲಾ ಬೋರ್ಡ್ ಗಳಲ್ಲೂ 5 ನೇ ತರಗತಿವರೆಗೆ ಕನ್ನಡ ಕಡ್ಡಾಯ ಕಲಿಕೆಗೆ ಶಿಫಾರಸ್ಸು ಮಾಡಲಾಗಿದೆ. 1 ನೇ ತರಗತಿಗೆ 5.9 ವರ್ಷವಾಗಿದ್ದರೂ ದಾಖಲಾತಿ ಮಾಡಲು ಅವಕಾಶ ನೀಡಬೇಕು. ಪ್ರಮುಖವಾಗಿ ಎಸ್ ಇಪಿ ಸಿಕ್ಷಣ ನೀತಿಯಲ್ಲಿ ಹಿಂದಿಗೆ ಕೊಕ್ ನೀಡಲಾಗಿದ್ದು ಕನ್ನಡ ಮತ್ತು ಇಂಗ್ಲಿಷ್ ಮಾತ್ರ ಬೋಧಿಸಲು ಶಿಫಾರಸ್ಸು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ