ಉಕ್ರೇನ್ನಲ್ಲಿ ಕನ್ನಡಿಗ ಸಾವು

ಮಂಗಳವಾರ, 1 ಮಾರ್ಚ್ 2022 (14:48 IST)
ಗ್ರೋಸರಿ ತರುವ ಸಲುವಾಗಿ ಹೊರಹೋಗಿದ್ದ ಹಾವೇರಿ ಮೂಲದ ನವೀನ್ ಬೆಳಗ್ಗೆ 7 ಗಂಟೆಗೆ ನಡೆದ ರಾಕೆಟ್‌ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಖಾರ್ಕಿವ್‌ನ ಶವಾಗಾರದಲ್ಲಿ ನವೀನ್‌ ಮೃತದೇಹ ಇರಿಸಲಾಗಿದೆ. ಉಕ್ರೇನ್‌ನ ಖಾರ್ಕಿವ್‌ನಲ್ಲಿ ನವೀನ್‌ ವ್ಯಾಸಂಗ ಮಾಡುತ್ತಿದ್ದ.
ಮೊನ್ನೆಯಿಂದಲೂ ಒಟ್ಟಿಗೆ ಇದ್ದೇವು. ನಿನ್ನೆ ರಾತ್ರಿ ತನಕ ಬಂಕರ್​ನಲ್ಲಿಯೇ ಇದ್ದರು. ನವೀನ್​ ಎಂಬಿಬಿಎಸ್ ನಾಲ್ಕನೇ ವರ್ಷ ವ್ಯಾಸಾಂಗ ಮಾಡುತ್ತಿದ್ದರು. ನಾವು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು. ನವೀನ್ ಸೂಪರ್ ಮಾರ್ಕೆಟ್​​ನಲ್ಲಿ ಕರೆನ್ಸಿ ಬದಾವಣೆಗೆ ಹೋಗಿದ್ದರು. ಈ ವೇಳೆ ಸರಿ ಸಾಲಿನಲ್ಲಿ ನಿಂತಾಗ ಫೈಯರ್​ ಆಗಿದೆ. ಡೆಸ್​​ಬ್ರೋ ಅನ್ನುವ ರೋಡ್​​ನಲ್ಲಿ ಶಲ್​ ದಾಳಿ ಮಾಡಿದ್ದಾರೆ. ಮೃತ ನವೀನ್ ಪೊಲ್ಯಾಂಡ್​​ಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ನವೀನ್​ ಜತೆಗಿದ್ದ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.
ನವೀನ್ ಇಲ್ಲಾ ಎಂಬುವ ಸುದ್ದಿ ಹರಿದಾಡುತ್ತಿರುವ ಬಗ್ಗೆ ರಾಯಭಾರಿ ಅಧಿಕಾರಿ ಜೊತೆ ನವೀನ್ ಸಹೋದರ ಮಾತುಕತೆ ನಡೆಸಿದ್ದಾರೆ. ಬೆಳಗ್ಗೆ ದಿನಬಳಕೆ ವಸ್ತು ತರಲು ಹೋಗಿದ್ದಾಗ ಅವಗಢವಾಗಿದೆ ಎಂದು ತಿಳಿಸಿದ್ದಾರೆ.
 
ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ವಿದೇಶಾಂಗ ಇಲಾಖೆಯಿಂದ ಮಾಹಿತಿ ಹೊರಬಿದ್ದಿದೆ. 21 ವರ್ಷದ ನವೀನ್‌ ಕುಟುಂಬದವರ ಜೊತೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ