Karnataka Weather: ಬೆಂಗಳೂರಿಗೆ ಸದ್ಯಕ್ಕೆ ಮಳೆಯಿಲ್ವಾ, ಇಲ್ಲಿದೆ ಲೇಟೆಸ್ಟ್ ಹವಾಮಾನ ವರದಿ

Krishnaveni K

ಗುರುವಾರ, 20 ಮಾರ್ಚ್ 2025 (10:57 IST)
ಬೆಂಗಳೂರು: ಕರ್ನಾಟಕದ ಕೆಲವು ಕಡೆ ಈಗಾಗಲೇ ಬೇಸಿಗೆ ಮಳೆ ಬೀಳುತ್ತಿದೆ. ಆದರೆ ಬೆಂಗಳೂರಿಗೆ ಸದ್ಯಕ್ಕೆ ಮಳೆಯಿಲ್ವಾ? ಬೆಂಗಳೂರಿನ ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ ನೋಡಿ.

ಕಳೆದ ವಾರ ಬೆಂಗಳೂರಿನಲ್ಲಿ ಸಣ್ಣ ಮಟ್ಟಿನ ಮಳೆಯಾಗಿತ್ತು. ಅದು ಬಿಟ್ಟರೆ ಕಳೆದ ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿ ಮಳೆಯೇ ಬಂದಿಲ್ಲ ಎನ್ನಬಹುದು. ಈಗಾಗಲೇ ಬಿರು ಬಿಸಿಲಿನಿಂದ ವಿಪರೀತ ಸೆಖೆ ವಾತಾವರಣ ಶುರುವಾಗಿದೆ.

ಬೇಸಿಗೆಯ ಬಿಸಿ ಈಗಾಗಲೇ ಬೆಂಗಳೂರಿನ ಜನತೆಗೆ ತಟ್ಟಿದೆ. ಈ ಬಾರಿ ತಾಪಮಾನ 40 ಡಿಗ್ರಿಯಷ್ಟು ಏರಿಕೆಯಾಗಲಿದೆ ಎಂದು ಈಗಾಗಲೇ ಹವಾಮಾನ ವರದಿಗಳು ಹೇಳಿವೆ. ಯಾಕೋ ಈಗಿನ ವಾತಾವರಣ ನೋಡಿದರೆ ಅದು ನಿಜವಾಗುವ ಎಲ್ಲಾ ಲಕ್ಷಣಗಳಿವೆ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ತಾಪಮಾನ ಮಿತಿ ಮೀರಿದರೂ ಆಗಾಗ ಮಳೆಯಾಗುತ್ತಿದೆ. ಆದರೆ ಬೆಂಗಳೂರಿಗೆ ಮಳೆ ಸೂಚನೆ ಇಲ್ವಾ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಹವಾಮಾನ ವರದಿಗಳ ಪ್ರಕಾರ ಇದೇ ವಾರವೇ ಬೆಂಗಳೂರಿನಲ್ಲಿ ಮಳೆಯಾಗಲಿದೆ.

ಈ ವಾರಂತ್ಯಕ್ಕೆ ಬೆಂಗಳೂರಿನಲ್ಲಿ ಸಣ್ಣ ಮಟ್ಟಿನ ಮಳೆಯಾಗುವ ಸೂಚನೆಯನ್ನು ಹವಾಮಾನ ವರದಿ ನೀಡಿದೆ. ಶನಿವಾರ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅದು ಬಿಟ್ಟರೆ ಮುಂದಿನ ವಾರ ಸಣ್ಣ ಮಳೆಯಾಗುವ ಸೂಚನೆಯಿದೆ. ಸದ್ಯದ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ