Karnataka Weather: ರಾಜ್ಯದಲ್ಲಿ ಸೈಕ್ಲೋನ್ ಮಳೆ ಯಾವ ದಿನದಿಂದ ಯಾವ ದಿನದವರೆಗೆ ನೋಡಿ

Krishnaveni K

ಮಂಗಳವಾರ, 1 ಏಪ್ರಿಲ್ 2025 (09:26 IST)
ಬೆಂಗಳೂರು: ರಾಜ್ಯದಲ್ಲಿ ಸೈಕ್ಲೋನ್ ಪ್ರಭಾವದಿಂದ ಈ ವಾರ ಕೆಲವು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಯಾವ ದಿನದಿಂದ ಯಾವ ದಿನದವರೆಗೆ ಮಳೆ ಇಲ್ಲಿ ನೋಡಿ.

ರಾಜ್ಯದಲ್ಲಿ ಇದೀಗ ಸುಡು ಬಿಸಿಲಿನ ವಾತಾವರಣವಿದೆ. ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಹಗಲು ಹೊರಗೆ ಕಾಲಿಡಲಾಗದಂತಹ ವಾತಾವರಣವಿದೆ. ಕಳೆದ ವಾರ ಕೆಲವು ಕಡೆ ಮಳೆಯಾಗಿದ್ದರೂ ಈ ವಾರದ ಆರಂಭದಿಂದಲೇ ಸುಡು ಬಿಸಿಲು ಕಂಡುಬರುತ್ತಿದೆ.

ಆದರೆ ಈಗ ಸೈಕ್ಲೋನ್ ಪ್ರಭಾವದಿಂದ ಗುರುವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆ ಸಿಕ್ಕಿದೆ. ಏಪ್ರಿಲ್ 2 ರಿಂದ ಏಪ್ರಿಲ್ 6 ರವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆ ಸೇರಿದಂತೆ ಬಹುತೇಕ ಕಡೆ ಗುರುವಾರದಿಂದ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಸೂಚನೆ ನೀಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ