ಕರ್ನಾಟಕ ಹವಾಮಾನ: ಇಂದು ಮಳೆಯಾಗುವ ಸಾಧ್ಯತೆಯಿದೆಯಾ

Sampriya

ಶುಕ್ರವಾರ, 7 ಫೆಬ್ರವರಿ 2025 (13:01 IST)
Photo Courtesy X
ಬೆಂಗಳೂರು:  ಕಳೆದ ಕೆಲ ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ಚಳಿಯ ವಾತಾವರಣದಿಂದ ಕೂಡಿದೆ. ಮಧ್ಯ ಉರಿಬಿಸಿಲಿನ ವಾತಾವರಣವಿದೆ.  

ಕಳೆದ ತಿಂಗಳು ಮಧ್ಯಾಹ್ನದ ವೇಳೆಯೂ ಚಳಿಯ ವಾತಾವರಣವಿತ್ತು.  ಆದರೆ ಇದೀಗ ವಾತಾವರಣದಲ್ಲಿ ಬದಲಾವಣೆಯನ್ನು ಕಾಣಬಹುದು. ಈ ವಾತಾವರಣವು ಆರೋಗ್ಯದ ಮೇಲೂ ಕೂಡಾ ಅಷ್ಟೊಂದು ಕೆಟ್ಟ ಪರಿಣಾಮ ಬೀಳುವುದಿಲ್ಲ.  

ಬೆಂಗಳೂರಿನಲ್ಲಿ ಇಂದಿನ ಕನಿಷ್ಠ ತಾಪಮಾನವು 17 ° C (ಡಿಗ್ರಿ ಸೆಲ್ಸಿಯಸ್) ನಲ್ಲಿ ದಾಖಲಾಗಿದೆ ಮತ್ತು ಗರಿಷ್ಠ ತಾಪಮಾನವು 29 ° C (ಡಿಗ್ರಿ ಸೆಲ್ಸಿಯಸ್) ವರೆಗೆ ಹೋಗುವ ನಿರೀಕ್ಷೆಯಿದೆ. ದಿನವಿಡೀ, ತಾಪಮಾನವು ಸುಮಾರು 28 ° C (ಡಿಗ್ರಿ ಸೆಲ್ಸಿಯಸ್) ಇರುತ್ತದೆ.

ಇದೇ ರೀತಿಯ ವಾತಾವರಣ ಕೆಲವು ದಿನಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ