ಬೆಂಗಳೂರು: ಕರ್ನಾಟಕದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬೇಸಿಗೆ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಇಂದು ಮಳೆಯ ಸಾಧ್ಯತೆಯಿರುತ್ತಾ? ಇಲ್ಲಿದೆ ಲೇಟೆಸ್ಟ್ ಹವಾಮಾನ ವರದಿ.
ಈ ವಾರ ಕಳೆದ ವಾರಕ್ಕೆ ಹೋಲಿಸಿದರೆ ಅಷ್ಟೊಂದು ಮಳೆಯಾಗಿಲ್ಲ. ಕೆಲವು ಕಡೆ ಮಾತ್ರ ಸಣ್ಣ ಮಟ್ಟಿಗೆ ಮಳೆಯಾಗಿದ್ದು ಬಿಟ್ಟರೆ ಬಹುತೇಕ ಬಿಸಿಲಿನ ವಾತಾವರಣವಿತ್ತು. ಹಾಗಿದ್ದರೂ ಕಳೆದ ಎರಡು ವಾರಗಳಲ್ಲಿ ವಾರಂತ್ಯಗಳಲ್ಲಿ ಮಳೆಯಿತ್ತು. ಆದರೆ ಇಂದು ರಾಜ್ಯದ ಒಟ್ಟಾರೆ ಹವಾಮಾನ ನೋಡುವುದಾದರೆ ಮಳೆಯಿಲ್ಲ.
ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ, ಹಾಸನ, ಮೈಸೂರು, ಬೆಂಗಳೂರು, ಮಂಡ್ಯ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂದು ಬಿಸಿಲು ಮತ್ತು ಮೋಡ ಕವಿದ ವಾತಾವರಣವಿರಲಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಮಳೆಯಾಗಿದ್ದೇ ಕಡಿಮೆ. ಆದರೆ ಮುಂದಿನ ವಾರ ರಾಜ್ಯದಲ್ಲಿ ಉತ್ತಮ ಗುಡುಗು ಸಹಿತ ಮಳೆಯ ನಿರೀಕ್ಷೆಯಿದೆ. ಕೆಲವೊಂದು ಮೂಲಗಳ ಪ್ರಕಾರ ಶೀಘ್ರದಲ್ಲೇ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ.