ಬೆಂಗಳೂರು: ರಾಜ್ಯದಲ್ಲಿ ಈ ವಾರ ಮಳೆ ಸಾಧ್ಯತೆಯಿದೆಯಾ, ಹವಾಮಾನ ಹೇಗಿರಲಿದೆ ಎಂಬ ಬಗ್ಗೆ ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ ತಪ್ಪದೇ ಗಮನಿಸಿ.
ದೇಶದಾದ್ಯಂತ ಕೆಲವೆಡೆ ಕಳೆದ ವಾರ ಮಳೆಯಾಗಿದ್ದು ಇದೆ. ಕರ್ನಾಟಕದಲ್ಲೂ ಮಳೆಯ ಸೂಚನೆಯಿತ್ತು. ಆದರೆ ನಿರೀಕ್ಷಿಸಿದಂತೆ ಮಳೆಯಾಗಿರಲಿಲ್ಲ. ಉತ್ತರ ಭಾರತದಲ್ಲಿ ಹಿಮಪಾತವಾಗಿ ಅನಾಹುತವಾಗಿತ್ತು. ಈ ವಾರ ಹವಾಮಾನದಲ್ಲಿ ಕೆಲವೊಂದು ಬದಲಾವಣೆ ನಿರೀಕ್ಷಿಸಬಹುದು.
ರಾಜ್ಯದಲ್ಲಿ ಈಗಾಗಲೇ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಈ ವಾರ ಗರಿಷ್ಠ ತಾಪಮಾನದಲ್ಲಿ ಮತ್ತೆ 1 ರಿಂದ 2 ಡಿಗ್ರಿಯಷ್ಟು ಏರಿಕೆ ಕಂಡುಬರುವ ಸೂಚನೆಯಿದೆ. ರಾಜ್ಯದ ಒಟ್ಟಾರೆ ಗರಿಷ್ಠ ತಾಪಮಾನ ಈ ವಾರ 33 ರಿಂದ 35 ಡಿಗ್ರಿಗೆ ತಲುಪುವ ಸಾಧ್ಯತೆಯಿದೆ.
ಅದರಲ್ಲೂ ಕರಾವಳಿ ಭಾಗದಲ್ಲಂತೂ ಉಷ್ಣ ಅಲೆಯ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಳೆದ ವಾರವೇ ತಾಪಮಾನ 40 ಡಿಗ್ರಿಯ ಆಸುಪಾಸು ಬಂದಿತ್ತು. ಆದರೆ ಈ ವಾರ ಆರಂಭದಲ್ಲಿ ತಾಪಮಾನ ಏರಿಕೆಯಾಗಲಿದ್ದು, ಮಧ್ಯಭಾಗದಲ್ಲಿ ಸಣ್ಣ ಮಟ್ಟಿಗೆ ಮಳೆಯ ಸೂಚನೆಯೂ ಇದೆ. ಉಳಿದಂತೆ ತಾಪಮಾನ ಏರಿಕೆಯಾಗುತ್ತಲೇ ಹೋಗಲಿದೆ.