Karnataka Weather: ರಾಜ್ಯದ ಹವಾಮಾನದಲ್ಲಿ ಇಂದು ಮಹತ್ವದ ಬದಲಾವಣೆ ಗಮನಿಸಿ

Krishnaveni K

ಗುರುವಾರ, 27 ಫೆಬ್ರವರಿ 2025 (08:45 IST)
ಬೆಂಗಳೂರು: ಕರ್ನಾಟಕದಲ್ಲಿ ಸತತ ಮೂರು ವಾರಗಳಿಂದ ತಾಪಮಾನ ಏರಿಕೆಯಾಗುತ್ತಲೇ ಇದೆ. ಇದರ ನಡುವೆ ಇಂದು ಹವಾಮಾನದಲ್ಲಿ ಸಣ್ಣ ಬದಲಾವಣೆ ನಿರೀಕ್ಷಿಸಬಹುದಾಗಿದೆ ಎನ್ನುತ್ತಿವೆ ವರದಿಗಳು.

ರಾಜ್ಯದ ಕೆಲವೆಡೆ ಈ ವಾರ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ತುಂತುರು ಮಳೆಯಾಗಿತ್ತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ವಾರ ಮಳೆ ಮುನ್ಸೂಚನೆ ನೀಡಲಾಗಿತ್ತು. ಅದರಂತೆ ಕೆಲವೆಡೆ ತುಂತುರು ಮಳೆಯಾಗಿದೆ.

ಹಾಗಿದ್ದರೂ ಬೆಂಗಳೂರು ಸೇರಿದಂತೆ ವಿವಿಧೆಡೆ ಬಿಸಿಲಿನ ಝಳ ವಿಪರೀತ ಎನಿಸುವ ಮಟ್ಟಿಗಿತ್ತು. ಹವಾಮಾನ ವರದಿಗಳ ಪ್ರಕಾರ ಇಂದು ಬಿಸಿಲಿನ ತಾಪ ಕೊಂಚ ಕಡಿಮೆಯಾಗಲಿದೆ. ಇಂದು ಕೊಂಚ ಮೋಡ ಕವಿದ ವಾತಾವರಣವೂ ಕಂಡುಬರಲಿದೆ ಎನ್ನಲಾಗಿದೆ.

ವಾಯುಭಾರ ಕುಸಿತದ ಪರಿಣಾಮವಾಗಿ ಈ ವಾರಂತ್ಯಕ್ಕೆ ಮಳೆಯ ಸೂಚನೆಯೂ ಇದೆ. ಇದರ ನಡುವೆ ಇಂದು ಮೋಡ ಕವಿದ ವಾತಾವರಣವಿರಲಿದ್ದು ತಾಪಮಾನ ಗರಿಷ್ಠ 31 ಡಿಗ್ರಿಯವರೆಗೆ ಇರಬಹುದು ಎನ್ನಲಾಗಿದೆ. ಕನಿಷ್ಠ ತಾಪಮಾನ 18 ಡಿಗ್ರಿಗೆ ಇಳಿಕೆಯಾಗಲಿದೆ. ಹೀಗಾಗಿ ಸತತ ಬಿಸಿಲಿನಿಂದ ಕಂಗೆಟ್ಟಿದ್ದ ಜನಕ್ಕೆ ಇಂದು ಕೊಂಚ ಮಟ್ಟಿಗೆ ತಂಪಾದ ವಾತಾವರಣದ ಖುಷಿ ಅನುಭವಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ