ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಈ ದಿನ ಮಳೆಯಿರುತ್ತಾ, ಬಿಸಿಲಿರುತ್ತಾ ಇಲ್ಲಿದೆ ವಿವರ

Krishnaveni K

ಗುರುವಾರ, 13 ಫೆಬ್ರವರಿ 2025 (09:09 IST)
ಬೆಂಗಳೂರು: ಕರ್ನಾಟಕ ಹವಾಮಾನ ವರದಿ ಪ್ರಕಾರ ಇಂದು ಮಳೆಯಿರುತ್ತಾ, ಬಿಸಿಲಿರುತ್ತಾ ಅಥವಾ ಒಣ ಹವೆಯಿರುತ್ತಾ ಎಂಬ ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ ನೋಡಿ.

ರಾಜ್ಯದಲ್ಲಿ ಈಗ ಒಣ ಹವೆ ನಡೆಯುತ್ತಿದ್ದು, ಹಗಲು ವಿಪರೀತ ಬಿಸಿಲಿನ ಝಳವಿರುತ್ತದೆ. ಬೆಳಗ್ಗಿನ ಹೊತ್ತು ಮಂಜು ಮುಸುಕಿದ ವಾತಾವರಣ ನೋಡಬಹುದಾಗಿದೆ. ಹಗಲು ಬೇಸಿಗೆ ಧಗೆ ಕಂಡುಬರುತ್ತಿದೆ.

ಸದ್ಯಕ್ಕೆ ರಾಜ್ಯದಲ್ಲಿ ಗರಿಷ್ಠ ತಾಪಮಾನ 30 ರ ಆಸುಪಾಸು ಬಂದು ತಲುಪಿದೆ. ಇದು ಇನ್ನೆರಡು ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಸದ್ಯಕ್ಕಂತೂ ಯಾವುದೇ ಸೈಕ್ಲೋನ್ ಅಥವಾ ಮಳೆಯ ಸಾಧ್ಯತೆಯಿಲ್ಲ.

ನಿನ್ನೆಯಂತೇ ಇಂದೂ ಗರಿಷ್ಠ ತಾಪಮಾನ 30-32 ಡಿಗ್ರಿಯವರೆಗೆ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇದೇ ತಾಪಮಾನವಿರಲಿದೆ. ಮುಂದಿನ ನಾಲ್ಕು ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ