ಕರ್ನಾಟಕ ಹವಾಮಾನದಲ್ಲಿ ಇಂದು ಏನು ಬದಲಾವಣೆ ತಪ್ಪದೇ ಗಮನಿಸಿ

Krishnaveni K

ಬುಧವಾರ, 12 ಫೆಬ್ರವರಿ 2025 (09:07 IST)
ಬೆಂಗಳೂರು: ಕರ್ನಾಟಕ ಹವಾಮಾನದಲ್ಲಿ ಈಗ ದಿನೇ ದಿನೇ ಬದಲಾವಣೆಯಾಗುತ್ತಿದ್ದು, ಇಂದು ಯಾವ ರೀತಿ ತಾಪಮಾನವಿರಲಿದೆ ಎಂಬ ಹವಾಮಾನ ವರದಿ ಇಲ್ಲಿದೆ ನೋಡಿ.

ಹವಾಮಾನದಲ್ಲಿ ಇಂದಿನಿಂದ ಕೊಂಚ ಬದಲಾವಣೆ ಕಂಡುಬರುವುದು. ಇಂದಿನಿಂದ ಬಿಸಿಲಿನ ತಾಪ ಕೊಂಚವೇ ಏರಿಕೆಯಾಗುತ್ತಾ ಸಾಗಲಿದೆ. ಇಂದು ಹಗಲು ಶುಭ್ರ ಆಕಾಶವಿರಲಿದ್ದು, ಬಿಸಿಲಿನ ಝಳ ನಿರೀಕ್ಷಿತವಾಗಿದೆ.

ಸಂಜೆ ಮತ್ತು ಬೆಳಗ್ಗಿನ ಜಾವ ಮಂಜು ಮುಸುಕಿದ ವಾತಾವರಣ ಮುಂದುವರಿಯಲಿದೆ. ಇನ್ನು ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗಿದ್ದರೂ ಇಂದಿನಿಂದಲೇ ತಾಪಮಾನದಲ್ಲಿ ಕೊಂಚ ಏರಿಕೆ ಕಂಡುಬರಲಿದೆ.

ನಿನ್ನೆ ಗರಿಷ್ಠ ತಾಪಮಾನ ಸರಾಸರಿ 29 ಡಿಗ್ರಿಯಷ್ಟಿತ್ತು. ಇಂದು ಇದು 30 ಡಿಗ್ರಿ ದಾಟುವ ನಿರೀಕ್ಷೆಯಿದೆ. ಕನಿಷ್ಠ ತಾಪಮಾನವೂ ಏರಿಕೆಯಾಗಲಿದ್ದು 17-18 ಡಿಗ್ರಿಯವರೆಗೆ ಬಂದು ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಹಾಗಿದ್ದರೂ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮಧ್ಯಾಹ್ನದ ವೇಳೆ ಹೊರಗಡೆ ಸುತ್ತಾಡುವುದು ಯೋಗ್ಯವಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ