ಬೆಂಗಳೂರು: ಕರ್ನಾಟಕ ಹವಾಮಾನ ವರದಿ ಪ್ರಕಾರ ಸದ್ಯಕ್ಕೆ ಮಳೆ ಸಾಧ್ಯತೆಯಿದೆಯೇ, ಇಂದಿನ ಹವಾಮಾನ ಪರಿಸ್ಥಿತಿ ಹೇಗಿರಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಕರ್ನಾಟಕದಲ್ಲಿ ಈಗ ಚಳಿ ಮತ್ತು ಬಿಸಿಲ ನಡುವೆ ಪೈಪೋಟಿ ನಡೆಯುತ್ತಿದೆ. ಬೆಳಗ್ಗಿನ ಹೊತ್ತು ಮಂಜು ಮುಸುಕಿದ ವಾತಾವರಣವಿದ್ದರೆ ಹಗಲು ಭಾರೀ ಬಿಸಿಲಿರುತ್ತದೆ. ಇದರಿಂದಾಗಿ ತಾಪಮಾನದಲ್ಲಿ ಏರಿಕೆ ಜೊತೆಗೆ ರಾತ್ರಿ ಚಳಿಯೂ ಕಂಡುಬರುತ್ತಿದೆ.
ಆದರೆ ಈ ವಾತಾವರಣ ಕೇವಲ ಒಂದು ವಾರವಿರಲಿದೆ. ಒಂದು ವಾರದ ಬಳಿಕ ರಾಜ್ಯದಲ್ಲಿ ಚಳಿ ಸಂಪೂರ್ಣವಾಗಿ ಮಾಯವಾಗಲಿದ್ದು, ಪಕ್ಕಾ ಬೇಸಿಗೆ ಶುರುವಾಗಲಿದೆ. ಈ ಬಾರಿ ಬೇಸಿಗೆ ತೀವ್ರವಾಗಲಿದ್ದು ತಾಪಮಾನ 39 ಡಿಗ್ರಿಯವರೆಗೂ ತಲುಪಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ಮಳೆಯ ಸೂಚನೆಯಿಲ್ಲ. ಹವಾಮಾನ ವರದಿ ಪ್ರಕಾರ ಮುಂದಿನ ಒಂದು ವಾರಗಳ ಕಾಲ ಒಣ ಹವೆ ಮುಂದುವರಿಯಲಿದೆ. ಅದಾದ ಬಳಿಕ ಬೇಸಿಗೆ ಶುರುವಾಗಲಿದೆ. ಸದ್ಯಕ್ಕೆ ಮಳೆಯ ಯಾವುದೇ ಮುನ್ಸೂಚನೆ ಕಂಡುಬರುತ್ತಿಲ್ಲ. ಇಂದು ರಾಜ್ಯದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿಯವರೆಗೆ ತಲುಪುವ ನಿರೀಕ್ಷೆಯಿದೆ. ಇಂದು ಆಕಾಶ ಶುಭ್ರವಾಗಿರಲಿದ್ದು, ಸಂಪೂರ್ಣವಾಗಿ ಬಿಸಿಲು ಕಂಡುಬರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.