ಕಾಸರಗೋಡಿನಲ್ಲೊಂದು ಮೈ ನಡುಗಿಸುವ ಆಕ್ಸಿಡೆಂಟ್ ವಿಡಿಯೋ
ಇದನ್ನು ವಾಹನ ಸವಾರರ ತಪ್ಪು ಎಂದೂ ಹೇಳಲಾಗದು. ವೇಗವಾಗಿ ವಾಹನಗಳು ಓಡಾಡುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ಮೈ ಎಲ್ಲಾ ಕಣ್ಣಾಗಿದ್ದರೂ ಸಾಲದು. ಅಂತಹದ್ದರಲ್ಲಿ ಈ ಮಹಿಳೆ ಸರಿಯಾಗಿ ಗಮನಿಸದೇ ರಸ್ತೆ ದಾಟಿದ್ದಾಳೆ. ಈ ವೇಳೆ ಕಾರೊಂದು ಬಂದು ಢಿಕ್ಕಿ ಹೊಡೆದಿದೆ.
ಪರಿಣಾಮ ಮಹಿಳೆ ಆಳೆತ್ತರಕ್ಕೆ ಚಿಮ್ಮಿ ರಸ್ತೆಗೆ ಬಿದ್ದಿದ್ದಾರೆ. ಈ ಭಯಾನಕ ಆಕ್ಸಿಡೆಂಟ್ ದೃಶ್ಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.