ಬಿಜೆಪಿಯಿಂದ ‘ಕಾವೇರಿ’ದ ಪ್ರತಿಭಟನೆ

ಸೋಮವಾರ, 21 ಆಗಸ್ಟ್ 2023 (16:30 IST)
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಖಂಡಿಸಿ, ಮಂಡ್ಯದ ಸಂಜಯ್ ಸರ್ಕಲ್‌ನಲ್ಲಿ ಬಿಜೆಪಿ ಬೃಹತ್​​​ ಪ್ರತಿಭಟನೆ ನಡೆಸಿತು. ಸರ್ಕಾರದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕಾವೇರಿ ನಮ್ಮದು, ಅಯ್ಯಯ್ಯೋ ಅನ್ಯಾಯ ಎಂದು ಷೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರು ಕಿವಿ ಮೇಲೆ ಹೂ ಇಟ್ಟು ರಾಜ್ಯ ಸರ್ಕಾರವನ್ನು ಅಣಕಿಸಿದ್ದಾರೆ. ರಸ್ತೆಗೆ ಹುರುಳಿ ಚೆಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಆಕ್ರೋಶ ಹೊರ ಹಾಕಿದೆ. ನೀರಾವರಿ ಬೆಳೆ ಬಿಟ್ಟು ಅರೆ ಖುಷ್ಕಿ ಬೆಳೆ ಬೆಳೆಯುವಂತೆ ಕೃಷಿ ಸಚಿವರು ರೈತರಲ್ಲಿ ಮನವಿ ಮಾಡಿದ್ರು. ಅದಕ್ಕೆ ಭತ್ತ, ಕಬ್ಬು ಬಿಟ್ಟು ಹುರುಳಿ ಬೆಳೆಯಬೇಕಾ ಎಂದು ಹುರುಳಿ ಚೆಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ