ಡಿಸಿಎಂ ಡಿಕೆಶಿವಕುಮಾರ್ ವಿಧಾನಸೌದದಲ್ಲಿ ಸುದ್ದಿಗೊಷ್ಠಿ ನಡೆಸಿದ್ರು. ಈ ವೇಳೆ ರಾಜ್ಯಕ್ಕೆ ಕಾವೇರಿ ವಿಚಾರಕ್ಕೆ ಪ್ರತ್ಯೇಕ ಪೀಠ ರಚನೆ ಮಾಡುವುದಾಗಿ ಸುಪ್ರೀಂ ಕೊರ್ಟ್ ಹೇಳಿದೆ.ನಮಗೆ ನೀರು ಬಿಡಲಿಕ್ಕೆ ಆದೇಶ ಮಾಡಿದ್ರು.ನಮಗೆ ನೀರು ಬಿಡಲಿಕ್ಕೆ ಆಗಲಿಲ್ಲ .ಬಿಜೆಪಿ ಜೆಡಿಎಸ್ ನಾಯಕರು ಬಹಳಷ್ಟು ಮತಾಡಿದ್ದಾರೆ.ಅವರಿಗೆ ನ್ಯಾಯಾಲಯದ ಅಂಶಗಳು ಗೊತ್ತಿದ್ರು ಮಾತಾಡ್ತಾಯಿದ್ದಾರೆ.ಅಗಸ್ಟ್ 30 ವರೆಗೂ 10 ಸಾವಿರ ಕ್ಯೂಸೆಕ್ ನೀರು ಬಿಡಬೇಕು.ನಮಗೆ ನೀರು ಬಿಡುವುದಕ್ಕೆ ಆಗಿಲ್ಲ.124 ಟಿಎಂಸಿ ನೀರು ನಮ್ಮ ರಾಜ್ಯಕ್ಕೆ ಬೇಕು ಈಗ ಇರೋದು 54 ಟಿಎಂಸಿ ನೀರು.ನಾನು ಬೆಳಿಗ್ಗೆ ಸಾಯಾಂಕಾಲ ಜಗಳ ಮಾಡುವುದು ಬೇಡ ಎಂದು ಕುತಗೊಂಡ ಮಾತೋಡಣ ಎಂದು ಮಾಡಿದ್ದೇನೆ .ಬೊಮ್ಮಾಯಿ ಅವರು ಸಿಎಂ ಒಂದು ಪತ್ರ ಬರೆದಿದ್ದಾರೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
2021 ಜೂನ್ ನಲ್ಲಿ ಕರ್ನಾಟಕ ತಮಿಳುನಾಡಿನ ಜನರು ಅಣ್ಣತಮ್ಮ ಇದ್ದಂತೆ ಹೊಂದಾಣಿಕೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.ಅದನ್ನ ನಾವು ಪಾಲನೆ ಮಾಡುತ್ತೇವೆ .ಅವರ ಪಾಲನ್ನ ನಾವು ಪ್ರಶ್ನೇ ಮಾಡುವುದಿಲ್ಲ.ನಾವು ಹೆಚ್ಚಿಗೆ ಏನಾದ್ರು ನೀರು ಬಿಟ್ಟಿದ್ದೇವಾ ?ಅದರ ಲೆಕ್ಕಾ ನಮ್ಮ ಬಳಿ ಇದೆ.ಒಟ್ಟಾರೆ ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷಸಭೆ ಕರಿಯಬೇಕು ಎಂದು ಮಾಡಿದ್ದೇವೆ .ಅವರ ಸಲಹೆಗಳನ್ನ ಪಡೆದುಕೊಳ್ಳಲು ಸಿದ್ದರಿದ್ದೇವೆ .ಮಹಾದಾಯಿ ವಿಚಾರದಲ್ಲಿಯು ಒಂದಿಷ್ಟು ಅಡಚಣೆಗಳು ಇದಾವೆ.ಮೇಕೆದಾಟು ಸೇರಿದಂತೆ ಎಲ್ಲಾ ವಿಚಾರಗಳು ಬುಧವಾರ ಚರ್ಚೆ ಮಾಡುತ್ತೇವೆ .ಈವತ್ತು ಬೆಳಿಗ್ಗೆ ತಿರ್ಮಾಣ ಮಾಡಿದ್ದಾರೆ.ಆ ಬಗ್ಗೆ ಎಲ್ಲಾ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡುತ್ತೇವೆ .ಸರ್ವಪಕ್ಷದ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ.ನೀರು ಬಿಟ್ಟಾಗ ಅವರು ಸಮುದ್ರಕ್ಕೊ,ಕೆರೆ ಗೆ ಎಲ್ಲಿಗೆ ಬಳಿಸಿಕೊಂಡಿದ್ದಾರೆ ಎಂದು ಕೇಳುವುದಕ್ಕೆ ನನಗೆ ಹಕ್ಕಿಲ್ಲ.ಅವರ ರಾಜ್ಯದ ನೀರು ಯಾವುದಕ್ಕಾದ್ರು ಬಳಿಸಿಕೊಳ್ಳಿ.ರಾಜ್ಯದ ಹಿತಸ್ಕೋರ ಬಿಜೆಪಿ ದಳದವರಿಗೆ ಉತ್ತರ ಕೊಡುವುದಿಲ್ಲ.ರೈತರಿಗೆ ಅವರ ಹಿತಕ್ಕೆ ಉತ್ತರ ಕೊಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಕೇಳ್ತರಾ ಎಂಬ ವಿಚಾರವಾಗಿ ಸರ್ವ ಪಕ್ಷದ ಸಭೆಯಲ್ಲಿ ಮಾತಾಡುತ್ತೇವೆ.ನಾವು ನೀರು ಎಷ್ಟು ಬಿಡುಗಡೆ ಮಾಡಿದ್ದೇವೆ ಎಲ್ಲಾ ಹೇಳುತ್ತೇವೆ.ಮಂಡ್ಯದಲ್ಲಿ ರೈತರು,ಬಿಜೆಪಿ ನಾಯಕರು ಪ್ರತಿಭಟನೆ ವಿಚಾರವಾಗಿ ಪಾಪ ಮಾತಾಡಲಿ ಬಿಡಿ ಮಾತಾಡೊರನ್ನ ಬೇಡ ಅನ್ನೊಕೆ ಆಗುತ್ತಾ?ಬಿಡೊದಕ್ಕೆ ನೀರು ಇಲ್ಲಾ .ನಮ್ಮ ಜನಕ್ಕೆ ಗೊತ್ತಿದೆ ಕೆಲವರು ರಾಜಕಾರಣ ಮಾಡುತ್ತಿದ್ದಾರೆ.ಇರೋದು 55 ಟಿಎಂಸಿ ನಮಗೆ ಬೇಕಾರೊದು 124 ಟಿಎಂಸಿ.ಕುಡಿಯುದಕ್ಕೂ ನೀರು ಬೇಕು .ಇದೆಕ್ಕೆಲ್ಲ ಮದ್ದು ಮೇಕೆ ದಾಟು ಯೋಜನೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.