ಸಂಕಷ್ಟದಲ್ಲಿ ನೆರವಾದ ಯೋಧರಿಗೆ ಸೆಲ್ಯೂಟ್ ಮಾಡಿ ಬೀಳ್ಕೊಡುತ್ತಿರುವ ಪ್ರವಾಹ ಪೀಡಿತರು!
ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿ ಗರ್ಭಿಣಿಯರು, ವೃದ್ಧರು, ಮಕ್ಕಳು ಸೇರಿದಂತೆ ಸಂತ್ರಸ್ತರನ್ನು ಸಾಹಸ ಮಾಡಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ಯೋಧರಿಗೆ ಮರಳುವಾಗ ಅಲ್ಲಿನ ಸಂತ್ರಸ್ತರು ಸೆಲ್ಯೂಟ್ ಮಾಡಿ ತಮ್ಮ ಕೃತಜ್ಞತೆ ಸಲ್ಲಿಸುತ್ತಿರುವ ದೃಶ್ಯ ಇದೀಗ ಕೇರಳದಲ್ಲಿ ಸಾಮಾನ್ಯವಾಗಿದೆ.
ಕೆಲವೆಡೆ ಕಾರ್ಯಾಚರಣೆ ಮುಗಿಸಿ ತೆರಳುತ್ತಿರುವ ಯೋಧರಿಗೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿ ಸೆಲ್ಯೂಟ್ ಹೊಡೆದು ಜನಸಾಮಾನ್ಯರು ಬೀಳ್ಕೊಡುತ್ತಿದ್ದಾರೆ. ನಮ್ಮ ಸೈನಿಕರಲ್ಲವೇ ನಿಜವಾದ ಹೀರೋಗಳು?!