ಕೇರಳ ತ್ಯಾಜ್ಯಕ್ಕೆ ಕರವೇ ಖಂಡನೆ

ಗುರುವಾರ, 17 ಜನವರಿ 2019 (15:00 IST)
ಕೇರಳದಿಂದ ಅನಧಿಕೃತ ತ್ಯಾಜ್ಯ ರವಾನೆಯಾಗುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗಿದೆ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕರ್ನಾಟಕದ ಗಡಿದಾಟಿ ಒಳನುಗ್ಗಿರುವ ಕೇರಳದ 2 ಲಾರಿಗಳನ್ನ ತಡೆದು ಪ್ರತಿಭಟನೆ ನಡೆಸಲಾಯಿತು.

ಕೊಳೆತ ಹಣ್ಣುಗಳು, ಮಾಂಸದ ತುಂಡುಗಳನ್ನು ಕರ್ನಾಟಕಕ್ಕೆ ತಂದು, ಗಡಿಭಾಗದ ಜಮೀನುಗಳಲ್ಲಿ ಸುರಿಯುವ ಯತ್ನ ನಡೆಸಲಾಗುತ್ತಿತ್ತು.

ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳಿದ್ದರೂ, ಒಳನುಗ್ಗಿರುವ ಲಾರಿಗಳ ಕ್ರಮಕ್ಕೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು, ತ್ಯಾಜ್ಯ ಕಳುಹಿಸುತ್ತಿರುವ ಕೇರಳ ರಾಜ್ಯಕ್ಕೆ ‌ಸರಕಾರ ಪತ್ರ ಬರೆಯುವಂತೆ ಒತ್ತಾಯಪಡಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ