ರಸ್ತೆಯಲ್ಲೇ ವೃದ್ಧೆಯ ಶವಯಿಟ್ಟು ಪ್ರತಿಭಟನೆ

ಸೋಮವಾರ, 14 ಜನವರಿ 2019 (17:32 IST)
ನಡುರಸ್ತೆಯಲ್ಲಿ ವೃದ್ಧೆಯೊಬ್ಬರ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ರಸ್ತೆ ಅಗಲೀಕರಣ ವೇಳೆ ಮನೆ, ಗುಡಿಸಲು, ಕಳೆದುಕೊಂಡಿದ್ದವರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಹೀಗಂತ ಆರೋಪಿಸಿ ಸ್ಥಳೀಯರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.  

ಚಾಮರಾಜನಗರದ ಉಪ್ಪಾರ ಸಮುದಾಯ ಹಾಗೂ ನಾಯಕ ಜನಾಂಗವಿರುವ  ಫುಟ್​ಪಾತ್​ನ ಜೋಪಡಿಯೊಂದರಲ್ಲಿ ಮನೆ ಕಳೆದುಕೊಂಡ ವೃದ್ಧೆಯೊಬ್ಬರು ತಡರಾತ್ರಿ ಸಾವಿಗೀಡಾಗಿದ್ದಾರೆ. ಸರ್ಕಾರದಿಂದ ಸೂಕ್ತ  ಪರಿಹಾರ ಇನ್ಯಾವಾಗ ನೀಡುತ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿ, ಶವವನ್ನು ಎಲ್ಲಿ ಇಟ್ಟುಕೊಳ್ಳಬೇಕು ಎಂದು ಗರಂ ಆದ ಸ್ಥಳೀಯರು  ರಸ್ತೆಯಲ್ಲಿ ಶವವಿಟ್ಟು 2 ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ, ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಚಾಮರಾಜನಗರದ ನಗರಸಭೆ ಆಯುಕ್ತ ರಾಜಣ್ಣ ಸ್ಥಳಕ್ಕಾಗಮಿಸಿ ಮಾತನಾಡಿ, ನಿವೇಶನ ಮತ್ತು ಪರಿಹಾರ ನೀಡಲು ತುರ್ತು ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ  ಪ್ರತಿಭಟನೆ ಕೈಬಿಡಲಾಯಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ