ದೇವಸ್ಥಾನದ ಹುಂಡಿ ದೋಚಿದ ಖದೀಮರು

ಬುಧವಾರ, 16 ಆಗಸ್ಟ್ 2023 (19:52 IST)
ದೇವಸ್ಥಾನದ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಮಂಡ್ಯದ ಗಾಂಧಿನಗರದ 6ನೇ ಕ್ರಾಸ್​ನಲ್ಲಿರುವ ಕಾಳಮ್ಮ ದೇವಸ್ಥಾನದಲ್ಲಿ ನಡೆದಿದೆ. ತಡರಾತ್ರಿ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಹುಂಡಿಯನ್ನ ಕದ್ದೊಯ್ದಿದ್ದಾರೆ. ಹುಂಡಿಯಲ್ಲಿದ್ದ ಸುಮಾರು 1.50 ಲಕ್ಷ ಹಣವನ್ನ ದೋಚಿ ಹುಂಡಿ ಎಸೆದು ಖದೀಮರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ