ವಿಷಪ್ರಾಶನ ಮಾಡಿ ನಾಯಿಗಳ ಮಾರಣಹೋಮ

ಸೋಮವಾರ, 14 ಆಗಸ್ಟ್ 2023 (15:28 IST)
ಮೂಕ‌ ಪ್ರಾಣಿಗಳ ಮೇಲೆ ಮನುಷ್ಯನ ಪ್ರತಾಪ ಮುಂದುವರೆದಿದೆ.ಮುಗ್ದ ಶ್ವಾನಗಳಿಗೆ ವಿಷ ಉಣಿಸಿ ಕೊಲೆ ಮಾಡಲಾಗಿದೆ. 18 ನಾಯಿಗಳಿಗೆ ಇವರೆಗೆ ವಿಷ ಪ್ರಾಷಣ ಮಾಡ್ಸಿ ಕೊಲೆ ಮಾಡಿರುವ ಘಟನೆ ಆರ್ ಆರ್ ನಗರದಲ್ಲಿ ನಡೆದಿದೆ. 18 ಶ್ವಾನಗಳ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಅನಿಮಲ್ ಆಕ್ಟಿವಿಸ್ಟ್ ನಿಂದ ಮೃತ ಶ್ವಾನ ದೇಹಗಳ ಶೋಧಕಾರ್ಯ ಮುಂದುವರೆದಿದೆ.ಆರ್ ಆರ್ ನಗರ ,ಹೊಸಕೆರೆಹಳ್ಳಿ ವಾರ್ಡ್ ಬೌಂಡ್ರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ನಾಯಿಗಳು ಪತ್ತೆಯಾಗಿದೆ.
 
ಇವರೆಗೆ 7 ಶ್ವಾನಗಳ ಮೃತದೇಹ ಪತ್ತೆಯಾಗಿದ್ದು,7 ರಲ್ಲಿ 5 ಮೃತದೇಹಗಳು ಸಂಪೂರ್ಣ ಕೊಳೆತು ಹೋಗಿದೆ.ಈ ಬಗ್ಗೆ ಆರ್ ಆರ್ ನಗರ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.ನಾಯಿಗಳ ದೇಹವನ್ನ ಹಗ್ಗ ,ಚೀಲದಲ್ಲಿ ಹಾಕಿ ತುಂಬಿ  ದುಷ್ಕರ್ಮಿಗಳು ಬೀಸಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ