KIADB ಯ 70 ಲಕ್ಷ ವಿದ್ಯುತ್ ಬಿಲ್ ಭರಿಸಲು ಸಿದ್ಧಗಂಗಾ ಮಠಕ್ಕೆ ಸರ್ಕಾರದ ನೋಟಿಸ್

Krishnaveni K

ಗುರುವಾರ, 19 ಡಿಸೆಂಬರ್ 2024 (11:35 IST)
ಬೆಂಗಳೂರು: ಕೆಐಎಡಿಬಿಯ ಬರೋಬ್ಬರಿ 70 ಲಕ್ಷ ರೂ. ವಿದ್ಯುತ್ ಬಿಲ್ ಭರಿಸುವಂತೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸರ್ಕಾರ ನೋಟಿಸ್ ನೀಡಿದೆ. ಇದರ ಬಗ್ಗೆ ಈಗ ಭಾರೀ ಆಕ್ರೋಶ ವ್ಯಕ್ತವಾಗಿದೆ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕೆಐಎಡಿಬಿ ತನ್ನ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಹೀಗಾಗಿ ನೀವೇ ವಿದ್ಯುತ್ ಬಿಲ್ ಪಾವತಿಸಿ ಎಂದು ಮನವಿ ಮಾಡಿದೆ. ಸಿದ್ಧಗಂಗಾ ಮಠದ ಸನಿಹದಲ್ಲಿರುವ ದೇವರಾಯನಪಟ್ಟಣ ಕೆರೆಗೆ ಕೆಐಎಡಿಬಿ ಪ್ರಾಯೋಗಿಕವಾಗಿ ಹೊನ್ನಹಳ್ಳಿಯಿಂದ ನೀರು ಹರಿಸಿತ್ತು.

ಈ ಯೋಜನೆ ಪರಿಪೂರ್ಣವಾಗಿ ಇನ್ನೂ ಜಾರಿಯಾಗಿಲ್ಲ. ಜಾರಿಯಾದರೆ ಸಿದ್ಧಗಂಗಾ ಮಠ ಸೇರಿದಂತೆ ಸುತ್ತಮುತ್ತಲ ಹಳ್ಳಿಗೆ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಆದರೆ ಯೋಜನೆ ಜಾರಿಯಾಗುವ ಮೊದಲೇ ಸಿದ್ಧಗಂಗಾ ಮಠಕ್ಕೆ ಬರೋಬ್ಬರಿ 70 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಲು ನೋಟಿಸ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ನೀರಿನ ಬಿಲ್ ಕಟ್ಟುವುದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಇಡೀ ಕೆರೆಗೆ ನೀರು ಹರಿಸಿರುವುದರ ವಿದ್ಯುತ್ ಬಿಲ್ ನಾವು ಕಟ್ಟಬೇಕು ಎಂದರೆ ಒಪ್ಪತಕ್ಕುದ್ದಲ್ಲ ಎಂದು ಸಿದ್ದಗಂಗಾ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿಗಳು ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ