Rapido ಬೈಕ್ನಲ್ಲಿ ಕಿಡ್ನಾಪ್, ರೂಮ್ನಲ್ಲಿ ಕೂಡಿ ಹಾಕಿ ಹಲ್ಲೆ..!
ಯುವಕನೊಬ್ಬನನ್ನು RAPIDO ಬೈಕ್ನಲ್ಲಿ ಕಿಡ್ನಾಪ್ ಮಾಡಿ ರೂಮ್ನಲ್ಲಿ ಕೂಡಿಹಾಕಿ ಸುಲಿಗೆ ನಡೆಸಿದ ಘಟನೆ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಮನು ಎಂಬವರು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಬೈಕ್ ಅನ್ನು ಏರುತ್ತಿದ್ದಂತೆ ಚಾಲಕ ಚಾಕು ತೋರಿಸಿ ಮನುನನ್ನು ಕಿಡ್ನಾಪ್ ಮಾಡಿದ್ದಾನೆ. ನಂತರ ರೂಮ್ಗೆ ಕರೆದೊಯ್ದು ಹಲ್ಲೆ ನಡೆಸಿ ಫೋನ್ ಪೇ ಮೂಲಕ ಮೂರು ಸಾವಿರ ರೂ. ವರ್ಗಾಯಿಸಿ ಪರಾರಿಯಾಗಿದ್ದಾನೆ.ಪವನ್ ಎಂಬಾತ ಕಿಡ್ನಾಪ್ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆ ನಂತರ ಮನು ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.