ಬೆಂಗಳೂರು : ನಿಮ್ಮ ಅಕೌಂಟ್ನಿಂದ ಟೆರರಿಸ್ಟ್ಗಗಳಿಗೆ ಹಣ ಟ್ರಾನ್ಸ್ಫರ್ ಆಗಿದೆ ಎಂದು ಅಧಿಕಾರಿಗಳಂತೆ ಕರೆ ಮಾಡಿ ಬೆದರಿಸಿ 6 ಲಕ್ಷ ರೂ. ವಂಚಿಸಿರುವ ಪ್ರಕರಣ ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಂಚಕರು ಕರೆ ಮಾಡಿ ನಿಮ್ಮ ಖಾತೆಯಿಂದ ಟೆರರಿಸ್ಟ್ಗಳಿಗೆ ಹಣ ಟ್ರಾನ್ಸ್ಫರ್ ಆಗಿದೆ. ಹೇಳಿಕೆ ದಾಖಲಿಸಬೇಕು ನಮ್ಮ ಫೈನಾನ್ಸ್ ಟೀಂ ಜೊತೆ ಮಾತನಾಡಿ ಎಂದು ಕಾಲ್ ಕಟ್ ಮಾಡಿದ್ದಾರೆ. ಐದು ನಿಮಿಷಗಳ ಬಳಿಕ ನಿಮಿಷದಲ್ಲಿ ಫೈನಾನ್ಸ್ ಟೀಂನಿಂದ ಎಂದು ಕರೆ ಮಾಡಿದ್ದಾರೆ.
ನಿಮಗೂ ಟೆರರಿಸ್ಟ್ಗಳಿಗೂ ಏನ್ ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಬಳಿಕ ಹಣ ಕೊಟ್ಟರೆ ಪಟ್ಟಿಯಿಂದ ಹೆಸರು ತೆಗೆಯುವುದಾಗಿ ಹೇಳಿದ್ದಾರೆ. ಈ ವೇಳೆ ಜೋರಾಗಿ ಮಾತನಾಡಿದರೆ ನಾಳೆಯೇ ದೆಹಲಿಗೆ ಬನ್ನಿ ಎಂದು ಬೆದರಿಕೆ ಕೂಡ ಹಾಕುತ್ತಾರೆ ಎನ್ನಲಾಗಿದೆ.
ನಗರದ ಮೈಕೋ ಲೇಔಟ್ ಹಾಗೂ ಸಂಪಿಗೆಹಳ್ಳಿ ಠಾಣೆಯಲ್ಲಿ ಈ ರೀತಿಯ ಎರಡು ಪ್ರಕರಣಗಳು ದಾಖಲಾಗಿವೆ. ಎರಡೂ ಪ್ರಕರಣದಿಂದ ಒಟ್ಟು 6 ಲಕ್ಷ ರೂ. ವಂಚನೆ ಮಾಡಲಾಗಿದೆ. ಈ ಬಗೆಯ ವಂಚನೆ ಹೆಚ್ಚಾಗುವ ಶಂಕೆ ಇದ್ದು ಜನರು ಜಾಗೃತರಾಗಿರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.