ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದ ಕಾಳಿಂಗ ಸರ್ಪದ ಆರ್ಭಟ!

ಗುರುವಾರ, 3 ಜನವರಿ 2019 (17:27 IST)
11 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ತೋರಿದ ಆರ್ಭಟಕ್ಕೆ ಇಡೀ ಗ್ರಾಮದ ಜನರೇ ಬೆಚ್ಚಿಬಿದ್ದಿದ್ದಾರೆ.
ಉರಗ ತಜ್ಞನ ಸೊಂಟದ ಮಟ್ಟಕ್ಕೆ ಹಾರಿದ ಕಾಳಿಂಗ ಸರ್ಪದ ಆರ್ಭಟ ಜನರನ್ನು ಬೆರಗುಗೊಳಿಸಿದೆ. ಕಾಳಿಂಗನನ್ನ ಸೆರೆ ಹಿಡಿಯುವಾಗ ಘಟನೆ ನಡೆದಿದೆ.

ಸೆರೆ ಹಿಡಿಯಲು ಎಳೆದಾಡುತ್ತಿದ್ದ ಉರಗ ತಜ್ಞನ ಮೇಲೆಯೇ ಕಾಳಿಂಗ ಸರ್ಪ ದಾಳಿಗೆ ಯತ್ನ ನಡೆಸಿದೆ. 11 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ದಿಢೀರನೆ ಸೊಂಟದೆತ್ತರಕ್ಕೆ ಹಾರಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಕಾಳಿಂಗನ ಆರ್ಭಟಕ್ಕೆ ಬೆಚ್ಚಿಬಿದ್ದ ಉರಗ ತಜ್ಞ ಹರೀಂದ್ರ, ನಂತರ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ದ್ವಾರಮಕ್ಕಿ ಗ್ರಾಮದಲ್ಲಿ ಘಟನೆ ನಡೆದಿದೆ. ಶ್ರೀಧರಗೌಡ ಎಂಬುವರ ಮನೆಗೆ ಬಂದಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸ್ಥಳೀಯ ಅರಣ್ಯಕ್ಕೆ ಬಿಟ್ಟ ಹರೀಂದ್ರ ಗ್ರಾಮಸ್ಥರ ನೆಮ್ಮದಿಗೆ ಕಾರಣರಾದರು. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ