ಸೆಪ್ಟೆಂಬರ್ ಕ್ರಾಂತಿ ಕಿಡಿ ಹೊತ್ತಿಸಿದ ರಾಜಣ್ಣಗೆ ಆಗಸ್ಟ್‌ನಲ್ಲೇ ಬಿಗ್ ಶಾಕ್ ನೀಡಿದ ಹೈಕಮಾಂಡ್‌

Sampriya

ಸೋಮವಾರ, 11 ಆಗಸ್ಟ್ 2025 (17:07 IST)
Photo Credit X
ಬೆಂಗಳೂರು: ಸಚಿವ ಸ್ಥಾನಕ್ಕೆ ಕೆಎನ್ ರಾಜಣ್ಣ ರಾಜೀನಾಮೆ ಸಲ್ಲಿಸುವ ಮೂಲಕ ಕರ್ನಾಟಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. 

ಪಕ್ಷದೊಳಗಿನ ವಿಚಾರ ಇರ್ಬೋದು ವಿಪಕ್ಷದ ಬಗ್ಗೆ ಕಟುವಾಗಿ ಹೇಳಿಕೆಯನ್ನು ನೀಡುವುದಕ್ಕು ಕೆಎನ್ ರಾಜಣ್ಣ ಅವರು ಹಿಂದೇಟು ಹಾಕುತ್ತಿರಲಿಲ್ಲ. ತಮ್ಮ ನೇರ ನುಡಿಯಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ದಿನದಿಂದಲೂ ತಮ್ಮ ನೇರ ನುಡಿಯಿಂದಲೇ ಗುರಿಯಾಗಿದ್ದರು. ಈಚೆಗೆ ಮತಗಳ್ಳತನ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದೆ ರಾಜಣ್ಣಗೆ ಮುಳುವಾಯಿತು ಎಂಬ ಮಾತು ಕೇಳಿಬಂದಿದೆ. 

ಈ ಸಂಬಂಧ ಹೈಕಮಾಂಡ್ ರಾಜಣ್ಣಗೆ ಪತ್ರ ಕಳುಹಿಸಿ, ಉತ್ತರಿಸುವಂತೆ ಹೇಳಿತ್ತು. ಅದರ ಬೆನ್ನಲ್ಲೇ ರಾಜಣ್ಣ ರಾಜೀನಾಮೆ ನೀಡಿದ್ದು, ಭಾರೀ ಕುತೂಹಲವನ್ನು ಮೂಡಿಸಿದೆ. 

ರಾಜೀನಾಮೆಯನ್ನು ರಾಜ್ಯಪಾಲರಾದ ಗೆಹ್ಲೋಟ್ ಅವರು ಅಂಗೀಕರಿಸಿದ್ದಾರೆ. ಅದಲ್ಲದೆ ಸಿಎಂ ಸಿದ್ದರಾಮಯ್ಯಗೆ  ಕರೆ ಮಾಡಿ ರಾಜೀನಾಮೆ ಸಂಬಂಧ ವಿಚಾರ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ರಾಜೀನಾಮೆ ನೀಡಿರುವ ರಾಜಣ್ಣಗೆ ಇದೀಗ ಪಕ್ಷದಿಂದ ಉಚ್ಛಾಟನೆಯಾಗುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬಂದಿದೆ. ಹೈಕಮಾಂಡ್ ಅವರನ್ನು ಉುಚ್ಛಾಟನೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ. ಹೀಗಾದಲ್ಲಿ ರಾಜಣ್ಣ ಅವರ ಮುಂದಿನ ನಿರ್ಧಾರ ಭಾರೀ ಕುತೂಹಲವನ್ನು ಮೂಡಿಸುತ್ತದೆ.


ವಿವಾದಾತ್ಮಕಹೇಳಿಕೆ. ಹೈಕಮಾಂಡ್‌ನಿಂದ ಕಾದಿದ್ಯಾ ಬಿಗ್ಗ್. ಉಚ್ಚಾಟನೆ ಆಗುತ್ತಾರಾ
ರಾಹುಲ್ ಗಾಂದಿ ವಿರುದ್ಧ ಹೇಳಿಕೆ ನೀಡಿದ ಸ'ನ'ಧ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ