ಮಾನವೀಯತೆ ಮೆರೆದ ಕೋಲಾರ ತಹಶೀಲ್ದಾರ್
ಅಫಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನ ತಹಶಿಲ್ದಾರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಕೋಲಾರದ ಬಂಗಾರಪೇಟೆ ತಹಶಿಲ್ದಾರ್ ದಯಾನಂದ್ ಗಾಯಾಳುವನ್ನ ರಕ್ಷಣೆ ಮಾಡಿದ್ದಾರೆ.ಬಂಗಾರಪೇಟೆ ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಘಟನೆ ನಡೆದಿದ್ದು,ಬೈಕ್ ಸವಾರ ಅಶ್ವಥ್ ನಾರಾಯಣ ಅವರ ಕಾಲಿನ ಮೇಲೆ ಟ್ರಾಕ್ಟರ್ ಹರಿದಿದ್ದು,ತಮ್ಮ ಸರ್ಕಾರಿ ವಾಹನದಲ್ಲಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆಯನ್ನ ತಹಶೀಲ್ದಾರ್ ಮೆರೆದಿದ್ದಾರೆ.ತಹಶೀಲ್ದಾರ್ ದಯಾನಂದ್ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.