ಗ್ರಾ ಪಂ ಹಾಲಿ ಅಧ್ಯಕ್ಷರ ಮುಂದುವರಿಕೆ ಮಾಡಿ ಎಂದ ಕೊಂಡಯ್ಯ

ಗುರುವಾರ, 14 ಮೇ 2020 (16:29 IST)
ಕೊರೊನಾ ವೈರಸ್ ಸೋಂಕು ಹಿನ್ನಲೆಯಲ್ಲಿ  ಗ್ರಾಮ ಪಂಚಾಯತಿಗಳಲ್ಲಿ ‌ಹಾಲಿ ಇರುವ ಅಧ್ಯಕ್ಷರು  ಮತ್ತು ಸದಸ್ಯರನ್ನು ಮುಂದಿನ ಚುನಾವಣೆವರೆಗೆ ಮುಂದುವರೆಸಬೇಕೆಂಬ ಆಗ್ರಹ ಕೇಳಿಬಂದಿದೆ.

ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾಗಿರುವ  ವಿಧಾನ ಪರಿಷತ್ ಸದಸ್ಯರ ವೇದಿಕೆ ಸಂಚಾಲಕ  ಕೆ.ಸಿ. ಕೊಂಡಯ್ಯ ಅವರು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ  ಕೆ.ಎಸ್.ಈಶ್ವರಪ್ಪ ಅವರನ್ನು ಪತ್ರ ಬರೆದು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯತಿಗಳ ಐದು ವರ್ಷದ ಆಡಳಿತ ಅವಧಿ ಈ ತಿಂಗಳು ಮುಗಿಯಲಿದೆ. ಪಂಚಾಯತ್ ರಾಜ್ ನಿಯಮಗಳಂತೆ ಹೊಸ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಬೇಕಿತ್ತು.

ಆದರೆ  ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಚುನಾವಣೆ ನಡೆಸುವುದು ಈಗ ಸೂಕ್ತವಲ್ಲ. ಅಧಿಕಾರಿಗಳು ಈಗಾಗಲೇ ಕೊರೋನಾ ಸಾಂಕ್ರಮಿಕದ ಪ್ರತಿಬಂಧಕ ಕಾರ್ಯದಲ್ಲಿ ನಿರತರಾಗಿರುವುದರಿಂದ ಹಾಗೂ ಹೊಸದಾಗಿ ರಚನೆಯಾದ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳಾಗಿ ನೇಮಿಸಿರುವುದರಿಂದ ಅವರಿಗೆ ಹೆಚ್ಚಿನ ಕಾರ್ಯಭಾರದ ಜವಾಬ್ದಾರಿ ಇದೆ.

ಆದ್ದರಿಂದ ಅವರನ್ನು ಗ್ರಾಮಪಂಚಾಯತಿಗಳಿಗೆ ಆಡಳಿತಾಧಿಕಾರಿಗಳಾಗಿ ನೇಮಿಸಿದರೆ, ಅವರಿಂದ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುವುದ ಕಠಿಣವಾಗುತ್ತದೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ