ನಿನ್ನೆ ಬೆಂಗಳೂರಲ್ಲಿ ಶಂಕಿತ ಉಗ್ರರು ಸಿಕ್ಕಿರುವ ಹಿನ್ನಲೆ ಅವರನ್ನು ಭಯೋತ್ಪಾದಕರು ಅಂತ ಕರೆಯೋಕೆ ಆಗಲ್ಲ ಅಂತ ಗೃಹ ಸಚಿವ ಪರಮೇಶ್ವರ್ ಹೇಳ್ತಾರೆ.ಈಗಾಗಲೇ ಅವರು ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ.ಉಗ್ರ ಚಟುವಟಿಕೆ ನಡೆಸುವ ಸಾಧ್ಯತೆ ಇತ್ತು ಎಂಬ ಮಾಹಿತಿ ಸಾರ್ವಜನಿಕವಾಗಿ ಗೊತ್ತಾಗಿದೆ.ಆದರೆ ಗೃಹ ಸಚಿವ ಪರಮೇಶ್ವರ್ ಅವರನ್ನು ಭಯೋತ್ಪಾದಕರು ಅಂತ ಈಗಲೇ ಹೇಳೋಕೆ ಆಗಲ್ಲ ಅಂತಾರೆ.ಇದೊಂದು ಹಾಸ್ಯಾಸ್ಪದ.ಹಾಗಾದ್ರೆ ಇವ್ರು ಸರ್ಕಾರದ ಮೊಮ್ಮಕಳಾ..? ಅಂತಾ ಕೋಟಾ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ.