ಕೋಟಿ ಕೋಟಿ ಒಡತಿ ಅರುಣಾ `ಲಕ್ಷ್ಮಿ'
ಗಣಿ ಧಣಿ ಜನಾರ್ದನ ರೆಡ್ಡಿ ಪತ್ನಿ ಜಿ.ಲಕ್ಷ್ಮೀ ಅರುಣ ಬಳ್ಳಾರಿ ನಗರ ಕ್ಷೇತ್ರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ತಮ್ಮ ಬಳಿ 96.23 ಕೋಟಿ ರೂ. ಚರಾಸ್ತಿ, 104.38 ಕೋಟಿ ರೂ. ಸ್ಥಿರಾಸ್ತಿ ಸೇರಿ ಒಟ್ಟು 200.61 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಪತಿ ಬಳಿ 29.20 ಕೋಟಿ ರೂ. ಚರಾಸ್ತಿ, 8 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 37.20 ಕೋಟಿ ರೂ. ಆಸ್ತಿ ಹಾಗೂ ಪುತ್ರ ಕಿರೀಟಿ ರೆಡ್ಡಿ ಬಳಿ 7.24 ಕೋಟಿ ರೂ. ಚರಾಸ್ತಿ ಇದೆ ಎಂದು ಘೋಷಿಸಿದ್ದಾರೆ.