ಕೋವಿಡ್ ಮೃತ್ಯು ಪರಿಹಾರ ಅರ್ಜಿಯನ್ನು ತಾಂತ್ರಿಕ ಕಾರಣಗಳಿಗೆ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

ಗುರುವಾರ, 20 ಜನವರಿ 2022 (20:43 IST)
ಕೆಲವೇ ಕೊರೊನಾ ಮೃತ್ಯು ಪರಿಹಾರ ಅರ್ಜಿಗಳು ಸ್ವೀಕೃತವಾಗಿರುವುದನ್ನು ಖಂಡಿಸಿರುವ ಸುಪ್ರೀಂ ಕೋರ್ಟ್ ಹಲವು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ಕೇರಳ ಮತ್ತು ಬಿಹಾರ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಕೊರೊನಾ ಮೃತ್ಯು ಪರಿಹಾರವನ್ನು ನೀಡಲಾಗಿರುವುದನ್ನು ನ್ಯಾಯಾಲಯ ಪ್ರಶ್ನಿಸಿದೆ.
ಬಿಹಾರದಲ್ಲಿ 12,000 ಕೊರೊನಾ ಅರ್ಜಿಗಳಿಗೆ ಪರಿಹಾರ ಮೊತ್ತ ಸಂದಾಯ ಮಾಡಲಾಗಿದೆ. ಇದನ್ನು ಗಮನಿಸಿರುವ ಸುಪ್ರೀಂ ಕೋರ್ಟ್ ಬಿಹಾರದಲ್ಲಿ ಕೇವಲ 12,000 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎನ್ನುವುದನ್ನು ನಂಬಲು ನ್ಯಾಯಾಲಯ ಸಿದ್ಧವಿಲ್ಲ ಎಂದಿದೆ. ತೆಲಂಗಾಣದಲ್ಲಿ 28,000ಕ್ಕೂ ಹೆಚ್ಚು ಅರ್ಜಿಗಳು ಹಾಕಲ್ಪಟ್ಟಿದ್ದು ಅದರಲ್ಲಿ 3993 ಮಂದಿಯ ಅರ್ಜಿಗಳು ಮಾತ್ರ ಸ್ವೀಕೃತವಾಗಿವೆ.
ಎಲ್ಲಾ ಅರ್ಹ ಕುಟುಂಬಗಳಿಗೆ ಕೊರೊನಾ ಮೃತ್ಯು ಪರಿಹಾರ ದೊರೆಯಬೇಕು ಎನ್ನುವುದು ನ್ಯಾಯಾಲಯದ ಆಶಯವಾಗಿದೆ. ಹೀಗಾಗಿ ತಾಂತ್ರಿಕ ಕಾರಣವೊಡ್ಡಿ ಅರ್ಜಿಗಳನ್ನು ನಿರಾಕರಿಸುವಂತಿಲ್ಲ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ