ಕೆಪಿಸಿಸಿ ನೂತನ ಪದಾಧಿಕಾರಿಗಳಿಗೆ ಈ ಮಾನದಂಡ ಇರಲೇಬೇಕು

ಗುರುವಾರ, 27 ಜೂನ್ 2019 (18:35 IST)
ಕೆಪಿಸಿಸಿ ನೂತನ ಪದಾಧಿಕಾರಿಗಳ ಆಯ್ಕೆಗೆ ಮಾನದಂಡ ನಿಗದಿಪಡಿಸಲಾಗಿದೆ.

ಕಟ್ಟುನಿಟ್ಟಿನ ಮಾನದಂಡವನ್ನು ಹೈಕಮಾಂಡ್ ರೂಪಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೈಕಮಾಂಡ್ ಹದ್ದಿನ ಕಣ್ಣಡಿಯಲ್ಲೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕನಿಷ್ಟ10 ವರ್ಷ ಪಕ್ಷ ಸಂಘಟಿಸಿದವರಿಗೆ ಅವಕಾಶ ಸಿಗಲಿದೆ. ಪ್ರಮಾಣಿಕತೆ, ಕಷ್ಟ ಸಹಿಷ್ಣುಗಳಿಗೆ ಆಯ್ಕೆಯಲ್ಲಿ ಸ್ಥಾನ ಹಾಗೂ ಆದ್ಯತೆ ಸಿಗಲಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಲಾಬಿಗೆ ಅವಕಾಶವಿಲ್ಲ. ಹಿರಿಯ ನಾಯಕರ ಪ್ರಭಾವಕ್ಕೂ ಮನ್ನಣೆಯಿಲ್ಲ. ಸಂಪೂರ್ಣ ಪಾರದರ್ಶಕ ಆಯ್ಕೆಗೆ ಹೆಚ್ಚಿನ ಒತ್ತು ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ.

ಎಐಸಿಸಿ ಕಾರ್ಯದರ್ಶಿಗಳಿಗೆ ಆಯ್ಕೆಯ ಅಧಿಕಾರ ನೀಡಲಾಗಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವಿಭಾಗವಾರು ಅಭ್ಯರ್ಥಿಗಳ ಪಟ್ಟಿ ಕಳಿಸುವಂತೆ ಸೂಚನೆ ಕೊಡಲಾಗಿದೆ.

ಹಾಲಿ ಇರುವ 300 ಪದಾಧಿಕಾರಿಗಳ ಸಂಖ್ಯೆಯನ್ನು 100 ಕ್ಕೆ ಇಳಿಸಲು ನಿರ್ಧಾರ ಮಾಡಲಾಗಿದೆ. ಕಟ್ಟುನಿಟ್ಟಿನಡಿ ಹೊಸ ಪದಾಧಿಕಾರಿಗಳ ಆಯ್ಕೆಗೆ ಒತ್ತು ನೀಡಲಾಗಿದೆ. 50 ವರ್ಷದೊಳಗಿನ ಉತ್ಸಾಹಿ ಯುವಕರಿಗೆ ಅವಕಾಶ ಮಾಡಿಕೊಡಲು ಕಾಂಗ್ರೆಸ್ ಚಿಂತನೆ ನಡೆಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ