ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

ಸೋಮವಾರ, 5 ಸೆಪ್ಟಂಬರ್ 2022 (19:22 IST)
ಬೆಂಗಳೂರಿನಲ್ಲಿ ಮಳೆ ಅವಾಂತರದಿಂದ ಸಾಕಷ್ಟು ಸಮಸ್ಯೆಯಾಗಿದ್ದು,ಈ ವಿಷಯವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
 
ಸರ್ಕಾರದಿಂದ ಏನು‌ ಬಯಸೋಕೆ ಸಾಧ್ಯ.ಮಳೆ ಬಂದು ಜನ ಸಂಕಷ್ಟದಲ್ಲಿದ್ದಾರೆ.ಮಂತ್ರಿಗಳು ಮನೆಯಲ್ಲಿ ಕುಳಿತಿದ್ದಾರೆ.ಸಂಪುಟ ವಿಸ್ತರಣೆ ಆಗುತ್ತೆ ಅಂತ ಕಾಯ್ತಿದ್ದಾರೆ.ಇನ್ನು ಲಿಂಬಾವಳಿ ಅವರ ಹಿರಿಯ ಮುಖಂಡರು ಮಹಿಳೆ ಬಗ್ಗೆ ಏನು ಮಾತನಾಡಿದ್ರು ಗೊತ್ತಿದೆ.ಐಟಿಬಿಟಿಯವರು ಸಿಎಂಗೆ ಪತ್ರ ಬರೆಯುತ್ತಾರೆ.ಮಳೆ ಬಂದು ಬೆಂಗಳೂರು ಅಸ್ತವ್ಯಸ್ಥವಾಗಿದೆ ಎಂದು ನಾವು ಬೆಂಗಳೂರು ಬಿಡ್ಬೇಕಾಗುತ್ತೆ ಅಂತ ಬರೆದಿದ್ದಾರೆ.ಮೊದಲು ವಿದೇಶದವರು ದೆಹಲಿಗೆ ಬರುತ್ತಿದ್ರು.ನಂತರ ಬೆಂಗಳೂರಿಗೆ ಬರೋಕೆ ಇಚ್ಚೆಪಡ್ತಿದ್ರು.ಎಸ್ ಎಂ ಕೃಷ್ಣ,ಸಿದ್ದರಾಮಯ್ಯ ಕಾಲದಲ್ಲಿ ಆ ರೀತಿ ಆಗಿತ್ತು .ಈಗ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಲೀಂ ಅಹ್ಮದ್ ಕಿಡಿಕಾರಿದ್ದಾರೆ.
 
ಇನ್ನು ಬಿಜೆಪಿ ಸರ್ಕಾರದಲ್ಲಿ ೪೦% ಕಮೀಷನ್ ಹೆಚ್ಚಾಗಿದೆ.ಬೆಂಗಳೂರು ಬಗ್ಗೆ ಯಾವುದೇ ಪ್ಲಾನಿಂಗ್ ಇಲ್ಲ.ಜನರಿಗೆ ಇವತ್ತು ನರಕ ದರ್ಶನ ವಾಗ್ತಿದೆ.ಇವತ್ತು ಉತ್ಸವ ಮಾಡೋಕೆ ಹೊರಟಿದ್ದಾರೆ.ಇವರು ಜನೋತ್ಸವ ಬಿಟ್ಟು ಕ್ಷಮೋತ್ಸವ ಮಾಡಬೇಕು.ದೊಡ್ಡ ದೊಡ್ಡ ಸಂಸ್ಥೆಗಳೇ ಪತ್ರಬರೆದಿವೆ.ರಾಷ್ಟ್ರೀಯ ಮಟ್ಟದಲ್ಲಿ ಇವತ್ತು ಚರ್ಚೆಯಾಗ್ತಿದೆ.ಸದನದಲ್ಲೂ ನಾವು ಇದನ್ನ ಪ್ರಸ್ತಾಪ ಮಾಡ್ತೇವೆ ಎಂದು ಸರ್ಕಾರದ ವಿರುದ್ಧ ಸಲೀಂ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ