ಇದೀಗ ಅಣೆಕಟ್ಟೆ ಬರೋಬ್ಬರಿ 106ಅಡಿಯಷ್ಟು ಭರ್ತಿಯಾಗಿದ್ದು, ಇನ್ನು ಕೇವಲ 18 ಅಡಿ ತುಂಬಿದ್ರೆ ಸಂಪೂರ್ಣ ಅಣೆಕಟ್ಟೆ ಭರ್ತಿಯಾದಂತಾಗುತ್ತದೆ. ವಾಡಿಕೆಯಂತೆ. 106 ಅಡಿ ನೀರು ತುಂಬಲು ಪ್ರತಿ ವರ್ಷ ಅಕ್ಟೋಬರ್ ತಿಂಗಾಳಾದ್ರೂ ಬೇಕಿತ್ತು. ಆದ್ರೆ ಈ ಬಾರಿ ಜೂನ್ ತಿಂಗಳಲ್ಲಿಯೇ 106 ಅಡಿ ತಲುಪಿದ್ದು, ಅಣೆಕಟ್ಟೆ ಭಾಗಶ: ತುಂಬಲಿದೆ ಎಂಬುದು ರೈತರ ಮಾತಾಗಿದ್ದು, ಬೆಳೆಗಳಿಗೆ ಈ ಬಾರಿ ಸಮರ್ಪಕ ನೀರು ಸಹ ದೊರೆಯಲಿದೆ ಎಂಬ ಸಂತಸ ರೈತರು ವ್ಯಕ್ತಪಡಿಸುತ್ತಾರೆ.
ಮಡಿಕೇರಿ ಜಿಲ್ಲೆಯ ತಲಕಾವೇರಿ ಕಾವೇರಿಯ ಉಗಮ ಸ್ಥಾನವಾಗಿರುವುದರಿಂದ ಮಡಿಕೇರಿಯಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಕೆ.ಆರ್.ಎಸ್. ಅಣೆಕಟ್ಟೆಗೆ ನೀರು ಹರಿದು ಬರುತ್ತಿದೆ. ಈಗಾಗಲೇ ಹೇಳಿದಂತೆ 106 ಅಡಿ ನೀರು ತಲುಪಲು ಸೆಪ್ಟೆಂಬರ್ ವರೆಗೆ ಕಾಯಬೇಕಿತ್ತು. ಆದ್ರೆ ಈ ಬಾರಿ ಮಾತ್ರ ಜೂನ್ ತಿಂಗಳಿಗೆ 106 ಅಡಿ ಮುಟ್ಟಿದ್ದು, ಸುಮಾರು 20 ವರ್ಷಗಳ ಹಿಂದೆ ಜೂನ್ ತಿಂಗಳಲ್ಲೇ ಇಷ್ಟು ನೀರು ಭರ್ತಿಯಾಗಿತ್ತಂತೆ. ಮಳೆ ಇದೇ ಪ್ರಮಾಣದಲ್ಲಿ ಇನ್ನೊಂದು ತಿಂಗಳು ಬಂದ್ರೆ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಲಿದೆ.