ಬೆಂಗಳೂರು: ಮಳೆಗಾಲದಲ್ಲಿ ಯಥೇಚ್ಛವಾಗಿ ದೊರಕುವ ಹಣ್ಣು ಎಂದರೆ ಹಲಸು. ಹಲಸಿನ ಹಣ್ಣಿನಲ್ಲಿ ಸಾಕಷ್ಟು ಬಗೆಯ ತಿನಿಸುಗಳನ್ನು ಮಾಡಬಹುದು. ಹಲಸು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಹಲಸಿನ ಹಣ್ಣಿನ ಹಲ್ವಾ ಮಾಡುವುದರ ಕುರಿತು ಇಲ್ಲಿದೆ ನೋಡಿ ಮಾಹಿತಿ.
ಒಂದು ಬಾಣಲೆಗೆ ತುಪ್ಪ ಹಾಕಿ ಅದಕ್ಕೆ ಹಲಸಿನ ಹಣ್ಣಿನ ಕತ್ತರಿಸಿದ ತೊಳೆಗಳನ್ನು ಹಾಕಿ ಅದಕ್ಕೆ ಸಕ್ಕರೆಯೂ ಹಾಕಿ ಕೈಯಾಡಿಸುತ್ತಾ ಇರಿ.ಇದು ಹಲ್ವಾ ಹದಕ್ಕೆ ಬಂದಾಗ ಕೆಳಗಿಳಿಸಿ ಏಲಕ್ಕಿ ಪುಡಿ, ಒಂದು ಚಮಚ ತುಪ್ಪ ಹಾಕಿ ಮುಚ್ಚಿ ಇಡಿ. ಐದು ನಿಮಿಷ ಬಿಟ್ಟು ಸರ್ವ್ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ