ರೈತ ನಾಯಕ ಪುಟ್ಟಣ್ಣಯ್ಯ ನಿಧನ: ತಂದೆಯ ಪಾರ್ಥಿವ ಶರೀರ ವಿಡಿಯೋ ಕಾಲ್ ಮೂಲಕ ದರ್ಶನ ಮಾಡಿದ ಮಕ್ಕಳು
ಸೋಮವಾರ, 19 ಫೆಬ್ರವರಿ 2018 (09:00 IST)
ಬೆಂಗಳೂರು: ನಿನ್ನೆ ರಾತ್ರಿ ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕಬಡ್ಡಿ ಪಂದ್ಯ ವೀಕ್ಷಣೆ ಮಾಡಿ ಮರಳುತ್ತಿದ್ದಾಗ ಹೃದಯಾಘಾತದಿಂದ ನಿಧನರಾದ ಶಾಸಕ, ರೈತ ನಾಯಕ ಕೆಎಸ್ ಪುಟ್ಟಣ್ಣಯ್ಯಗೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.
ವಿದೇಶದಲ್ಲಿರುವ ಅವರ ಮಕ್ಕಳು ಮೊಮ್ಮಕ್ಕಳು ಬಂದ ಮೇಲಷ್ಟೇ ಮೃತರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಈ ನಡುವೆ ವಿದೇಶದಲ್ಲಿರುವ ಮಕ್ಕಳು, ಮೊಮ್ಮಕ್ಕಳು ನಾಳೆ ತಲುಪುವ ನಿರೀಕ್ಷೆಯಿದೆ.
ಅದಕ್ಕೂ ಮೊದಲು ವಿಡಿಯೋ ಕಾಲ್ ಮೂಲಕ ಪಾರ್ಥಿವ ಶರೀರ ವೀಕ್ಷಿಸಿದ ಮಕ್ಕಳು ಕಣ್ಣೀರಿಟ್ಟಿದ್ದಾರೆ. ಅಲ್ಲದೆ, ತಾವು ಬರುವವರೆಗೆ ಅಂತಿಮ ಕ್ರಿಯೆ ನಡೆಸಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ