ಫೀವರ್ ಕ್ಲಿನಿಕ್ ಆದ KSRTC ಬಸ್

ಗುರುವಾರ, 30 ಏಪ್ರಿಲ್ 2020 (16:32 IST)
ಕೊರೊನಾ ವಿರುದ್ಧ ಹೋರಾಡುತ್ತಿರುವ ಕೆಎಸ್‌ಆರ್‌ಟಿಸಿ ಇದೀಗ ತನ್ನ ಬಸ್‌ನ್ನು ಮೊಬೈಲ್ ಫೀವರ್ ಕ್ಲಿನಿಕ್ ಆಗಿ ಪರಿವರ್ತಿಸಿ ಕಾರ್ಯನಿರ್ವಹಿಸಲು ಮುಂದಾಗಿದೆ.

ರಾಯಚೂರು ಜಿಲ್ಲೆಯಾದ್ಯಂತ ಮಹಾಮಾರಿ ಕೊರೋನಾ ವೈರಸ್ ಪತ್ತೆಹಚ್ಚಲು ಜಿಲ್ಲಾಡಳಿತ ಮೊಬೈಲ್ ಫೀವರ್ ಕ್ಲಿನಿಕ್ ಮತ್ತು ಗಂಟಲು ದ್ರವ ಸಂಗ್ರಹಿಸಲು, ಕೆಎಸ್‌ಆರ್‌ಟಿಸಿ ಬಸ್ ಪ್ರಾರಂಭಿಸಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿದೆ.

ಈ ಮೊದಲು ಕೊರೋನಾ ವೈರಸ್ ಮಹಾಮಾರಿ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ತನ್ನ ಡಿಪೋದಲ್ಲಿದ್ದ ಹಳೆ ಬಸ್‌ಗಳನ್ನು ಮೊಬೈಲ್ ಸ್ಯಾನಿಟೈಸರ್‌ಗಳಾಗಿ ಪರಿವರ್ತಿಸಿತು.

ಇದೀಗ ಜಿಲ್ಲಾಡಳಿತ ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನನ್ನು ಮೊಬೈಲ್ ಕ್ಲಿನಿಕ್ ಆಗಿ ಬದಲಾಯಿಸಿ ಜನರ ಆರೋಗ್ಯ ತಪಾಸಣೆ ಮಾಡಲು ಸಜ್ಜಾಗಿದೆ.

ರಾಯಚೂರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸದ್ಯಕ್ಕೆ ಈ ಬಸ್ ಸಂಚಾರ ಮಾಡಲಿದೆ. ಈ ಬಸ್‌ನಲ್ಲಿ ಕೊರೋನಾ ವೈರಸ್ ಹೊರತುಪಡಿಸಿ ಸಾಮಾನ್ಯ ಆರೋಗ್ಯ ಸೇವೆ ನೀಡಲಾಗುತ್ತಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ