ಕುಮಾರಧಾರ-ನೇತ್ರಾವತಿ ಸಂಗಮ: ನದಿ ನೀರಲ್ಲಿ ಜನರು ಮಾಡಿದ್ದೇನು?
ಶನಿವಾರ, 10 ಆಗಸ್ಟ್ 2019 (17:27 IST)
ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮದಿಂದ ಭಕ್ತರ ಹರ್ಷೋದ್ಘಾರ ಮುಗಿಲುಮುಟ್ಟಿದೆ.
ಉಪ್ಪಿನಂಗಡಿ ದೇಗುಲದಲ್ಲಿ ನದಿಗಳ ಸಂಗಮವಾಗಿದೆ.
ಶ್ರೀಕ್ಷೇತ್ರ ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ಕುಮಾರಧಾರ – ನೇತ್ರಾವತಿಗಳ ಸಂಗಮವಾಗಿದೆ.
ಸೇರಿದ್ದ ಸಹಸ್ರಾರು ಭಕ್ತರಿಂದ ಮುಗಿಲು ಮುಟ್ಟಿದೆ ಹರ್ಷೋದ್ಘಾರ.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮವಾಗಿದ್ದು, ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಲಾಗಿದೆ.
ಸಹಸ್ರಲಿಂಗೇಶ್ವರ ದೇವರಿಗೆ ಸಂಗಮ ಅಭಿಷೇಕ ಹಾಗೂ ಪೂಜೆ ಮಾಡಲಾಗಿದೆ.
ಮಹಾಕಾಳಿ ದೇಗುಲದ ಎದುರು ಭಾಗದಿಂದ ಬಂದಿದ್ದ ನೇತ್ರಾವತಿ ನದಿ ನೀರು ಹಿಂದಿನ ಭಾಗದಿಂದ ಬಂದಿದ್ದ ಕುಮಾರಧಾರ ನದಿ ನೀರಿನೊಂದಿಗೆ ಸೇರಿ ಸಂಗಮವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ದಕ್ಷಿಣ ಕಾಶಿಯೆಂದೇ ಪರಿಚಿತವಾಗಿದೆ.