ಉಕ್ಕಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ ನದಿಗಳಿಂದ ಆ ದೇವಾಲಯದಲ್ಲಿ ಸಂಗಮ ಆಗುತ್ತಾ ಅನ್ನೋ ಪ್ರಶ್ನೆ ಭಕ್ತರಿಂದ ಕೇಳಿಬರುತ್ತಿದೆ.
ಐತಿಹಾಸಿಕ ಉಪ್ಪಿನಂಗಡಿ ದೇಗುಲದಲ್ಲಿ ಸಂಗಮದ ನಿರೀಕ್ಷೆ ಮಾಡಲಾಗುತ್ತಿದೆ.
ಮೈದುಂಬಿ ಹರಿಯುತ್ತಿರುವ ಉಪ್ಪಿನಂಗಡಿ ನೇತ್ರಾವತಿ- ಕುಮಾರಧಾರ ನದಿಗಳು ಇಂಥದ್ದೊಂದು ಚರ್ಚೆಗೆ ಕಾರಣವಾಗಿದೆ.
ಉಭಯ ನದಿಗಳು ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇಗುಲದ ಬಳಿ ಸಂಗಮ ಆಗೋ ಸಾಧ್ಯತೆ ಕಂಡುಬರುತ್ತಿದೆ.
ಐತಿಹಾಸಿಕ ಕ್ಷಣ ನೋಡಲು ಭಕ್ತಾಧಿಗಳು ಕಾತುರರಾಗಿದ್ದಾರೆ. ನೇತ್ರಾವತಿ ನದಿಗಳ ಅಪಾಯದ ಮಟ್ಟ 30.5 ಮೀ
ಸದ್ಯ 30 ಮೀಟರ್ ನಲ್ಲಿ ಹರಿಯುತ್ತಿದೆ. ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ಕಾಣಿಸುತ್ತಿದೆ ಒಂದು ಮೆಟ್ಟಿಲು.
ಉಭಯ ನದಿಗಳಲ್ಲಿ ಇನ್ನಷ್ಟು ನೀರು ಹರಿದು ಬಂದರೆ ಸಂಗಮ ಸಾಧ್ಯತೆ ದಟ್ಟವಾಗಿದೆ.
ದೇವಾಲಯದ ಆವರಣದೊಳಗಡೆ ನೆರೆ ನೀರು ಪ್ರವೇಶಿಸಿದರೆ ಸಂಗಮ ಆಗುತ್ತದೆ.
ಉಭಯ ನದಿಗಳ ನೀರು ಶ್ರೀ ಸಹಸ್ರಲಿಂಗೇಶ್ವರ ದೇಗುಲದ ಮುಂಭಾಗಕ್ಕೆ ಬಂದು ಒಂದಕ್ಕೊಂದು ಸಂಧಿಸಿದರೆ ಆಗ ಸಂಗಮ ವಾಗುತ್ತದೆ.
ಸಂಗಮದ ಬಳಿಕ ದೇವಾಲಯದ ವತಿಯಿಂದ ಗಂಗಾಪೂಜೆ ನಡೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ.