ತಂದೆಯೇ ಪಿಎಂ ಸ್ಥಾನ ಬಿಟ್ಟ ಬಂದಿರುವಾಗ ಮಗನಾಗಿ ನಾನು ಸಿಎಂ ಸ್ಥಾನ ಬಿಡಲು ಹಿಂದೇಟು ಹಾಕ್ತೀನಾ - ಕಾಂಗ್ರೆಸ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಿಎಂ

ಗುರುವಾರ, 31 ಜನವರಿ 2019 (07:57 IST)
ಬೆಂಗಳೂರು : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ತಂದೆಯೇ ಪಿಎಂ ಸ್ಥಾನ ಬಿಟ್ಟ ಬಂದಿರುವಾಗ ಮಗನಾಗಿ ನಾನು ಸಿಎಂ ಸ್ಥಾನ ಬಿಡಲು ಹಿಂದೇಟು ಹಾಕ್ತೀನಾ  ಎಂದು  ಪರೋಕ್ಷವಾಗಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಜನರಿಗೆ ಮೋಸ ಮಾಡಿ ನಾನು ಏನು ಸಾಧನೆ ಮಾಡಲಿ? ಸಿಎಂ ಸ್ಥಾನ ಬಿಡಲು ನನಗೆ ಕಷ್ಟ ಏನಿಲ್ಲ ಅಧಿಕಾರದಲ್ಲಿ ಶಾಶ್ವತವಾಗಿ ಇರೋದಕ್ಕೆ ಆಗುತ್ತಾ? 16 ಸೀಟು ಪಡೆದು ನನ್ನ ತಂದೆಯವರು ಪ್ರಧಾನಿಯಾಗಿದ್ದರು. ಬಳಿಕ ಸುಲಭವಾಗಿ ತಂದೆ ಸ್ಥಾನವನ್ನು ಬಿಟ್ಟು ಬಂದಿದ್ದಾರೆ. ಅಂತವರ ಮಗನಾಗಿ ಸಿಎಂ ಸ್ಥಾನ ಬಿಡಲು ನಾನು ಹಿಂದೇಟು ಹಾಕುತ್ತೇನಾ ಎಂದು ಹೇಳಿದ್ದಾರೆ.

 

ಬೆಂಗಳೂರಿನಲ್ಲಿ 12 ವರ್ಷಗಳಿಂದ ನಿಂತಿದ್ದ ಕೆಲಸವನ್ನು ನಾನು ಪ್ರಾರಂಭ ಮಾಡಿದ್ದೇನೆ. ಎಷ್ಟು ದಿನ ಇಂತಹ ಮಾತು ನಾನು ಸಹಿಸಿಕೊಳ್ಳಲಿ. ಸರ್ಕಾರದಲ್ಲಿ ಕೆಲಸವಾಗಿಲ್ಲ ಅಂತ ಪಾಪ ಯಾರೋ ಒಬ್ಬರು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ 1 ಲಕ್ಷ ಕೋಟಿ ರೂ. ಯೋಜನೆ ಕೊಟ್ಟಿರುವುದು ಅವರಿಗೆ ಗೊತ್ತಿಲ್ಲವೆಂದು ಅನಿಸುತ್ತದೆ ಎಂದು ಸಿಎಂ ಶಾಸಕ ಎಸ್.ಟಿ.ಸೋಮಶೇಖರ್ ಹೆಸರನ್ನು ಹೇಳದೇ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ