ಕರ್ನಾಟಕಕ್ಕೆ ಬಂದು ಎಸ್‌ಐಟಿ ತನಿಖೆ ಎದುರಿಸಿ, ಪ್ರಜ್ವಲ್‌ ರೇವಣ್ಣಗೆ ಕುಮಾರಸ್ವಾಮಿ ಮನವಿ

sampriya

ಮಂಗಳವಾರ, 21 ಮೇ 2024 (14:55 IST)
Photo By X
ಬೆಂಗಳೂರು: ಲೈಂಗಿಕ ಕಿರುಕುಳದ ಆರೋಪದ ಮೇಲೆ ಎಸ್‌ಐಟಿ ತನಿಖೆಗೆ ಬೇಕಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಕರ್ನಾಟಕಕ್ಕೆ ವಾಪಾಸ್‌ ಬಂದು ತನಿಖೆ ಎದುರಿಸುವಂತೆ ಜೆಡಿಎಸ್ ಮುಖಂಡ ಎಚ್‌.ಡಿ ಕುಮಾರಸ್ವಾಮಿ ಮನವಿ ಮಾಡಿದರು.

ಮಾಧ್ಯಮದ ಜತೆ ಮಾತನಾಡಿದ ಅವರು, ಪ್ರಜ್ವಲ್‌ ರೇವಣ್ಣ ಅವರು ಕರ್ನಾಟಕಕ್ಕೆ ವಾಪಾಸ್‌ ಬಂದು ತನಿಖೆಯನ್ನು ಎದುರಿಸಬೇಕೆಂದು ಮನವಿ ಮಾಡುತ್ತೇನೆ. ತಪ್ಪು ಮಾಡದಿದ್ದರೆ ಯಾಕೆ ಹೆದರಿ, ಓಡಿ ಹೋಗಿದ್ದೀರಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಈ ಪ್ರಕರಣವನ್ನು ದುರ್ಬಳಕೆ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ಹಿಂದೆ ಮೇ 18 ರಂದು ಜೆಡಿಎಸ್ ಹಿರಿಯ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಜ್ವಲ್ ವಿರುದ್ಧ ರಾಜ್ಯ ಸರ್ಕಾರವು ಎಲ್ಲಾ ಕಾನೂನು ಮಾರ್ಗಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಆದರೆ ಅವರ ಪುತ್ರ, ಶಾಸಕ ಹೆಚ್.ಡಿ.ರೇವಣ್ಣ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು.

ಈ ಹಿಂದೆ ಮೇ 6 ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್ ರೇವಣ್ಣ ಅವರನ್ನು ವಿದೇಶದಿಂದ ಭಾರತಕ್ಕೆ ಕರೆತರುವ ಮೂಲಕ ಕರ್ನಾಟಕ ಎಸ್‌ಐಟಿ ತಂಡಕ್ಕೆ ತನಿಖೆಗೆ ಸಹಾಯ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ