ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ: ರೋಗಿಗಳ ಪರದಾಟ

ಗುರುವಾರ, 6 ಸೆಪ್ಟಂಬರ್ 2018 (17:14 IST)
ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರೋದ್ರಿಂದ ರೋಗಿಗಳು ಪರದಾಡುವಂತಾಗಿದೆ. 

ಬಳ್ಳಾರಿಯ ಸರಕಾರಿ ಜಿಲ್ಲಾಸ್ಪತ್ರೆಗೆ ಹೆರಿಗೆ, ಮಕ್ಕಳು ಮತ್ತು ಜನರಲ್ ಚಿಕಿತ್ಸೆಗಾಗಿ ಪ್ರತಿನಿತ್ಯ ಸಾವಿರಾರು ರೋಗಿಗಳು ಅಗಮಿಸುತ್ತಿದ್ದಾರೆ. ಅದೇ ರೀತಿ ಹೆರಿಗೆಗಾಗಿ ಪ್ರತಿನಿತ್ಯ 60 ಕ್ಕೂ ಹೆಚ್ಚು ಗರ್ಭಿಣಿಯರು  ದಾಖಲಾಗುತ್ತಾರೆ. ಇತ್ತೀಚೆಗೆ ಸರಿಯಾದ ಸಮಯಕ್ಕೆ ವೈದ್ಯರು ಬಾರದೇ ಇರೋದ್ರಿಂದ ರೋಗಿಗಳು ಪರದಾಡುವಂತಾಗಿದೆ. 

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದಾರೆ. ಅವರ ಅನುಪಸ್ಥಿತಿ ಗಮನಿಸಿ ಅನೇಕ ವೈದ್ಯರು  ಆಸ್ಪತ್ರೆಗೆ ಬಾರದೇ ಚಕ್ಕರ್ ಹೊಡೆದಿದ್ದಾರೆ. ಮಕ್ಕಳು ಮತ್ತು ಮಹಿಳೆಯರ ವಿಭಾಗದಲ್ಲಿ ಒಬ್ಬರೇ ವೈದ್ಯರು ಇರೋದ್ರಿಂದ ಅನಿವಾರ್ಯವಾಗಿ ರೋಗಿಗಳು ಮತ್ತು ಅವರ ಪೋಷಕರು ಸಕಾಲಕ್ಕೆ ಚಿಕಿತ್ಸೆಗೆ ಒಳಗಾಗದೇ ಸರದಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ಬಂದೊದಗಿದೆ. ರೋಗಿಗಳ ಪರದಾಟ ಇಲ್ಲಿ ಸಾಮಾನ್ಯವಾಗಿದೆ ಎಂಬ ಆರೋಪಗಳು ಪದೇ ಪದೇ ಕೇಳಿಬರುತ್ತಿವೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ