'ಕಾವೇರಿ'ಗಾಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ

ಸೋಮವಾರ, 4 ಸೆಪ್ಟಂಬರ್ 2023 (14:55 IST)
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಹಿನ್ನೆಲೆ ಮಂಡ್ಯದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯದ ಡಿಸಿ ಕಚೇರಿ ಸಮೀಪದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಹೋರಾಟ ನಡೆಸಿ, ಕಾವೇರಿ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿದ್ರು. ಹಾಲು-ಮೊಸರು, ಕುಂಕುಮ, ಅರಿಸಿಣ, ಎಳನೀರು, ಜೇನುತುಪ್ಪದಿಂದ ಅಭಿಷೇಕ ಮಾಡಿ, ಕಾವೇರಿ ಪ್ರತಿಮೆ ಬಳಿ ಖಾಲಿ ಬಿಂದಿಗೆ ಇಟ್ಟು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು, ರಾಜ್ಯ ಸರ್ಕಾರ ಯಾವುದೇ ರೀತಿಯ ನಿಲುವನ್ನ ತೆಗೆದುಕೊಳ್ಳುತ್ತಿಲ್ಲ, ತಕ್ಷಣವೇ ನಮ್ಮ ನೀರು ತಮಿಳುನಾಡಿಗೆ ಹೋಗುತ್ತಿರುವುದನ್ನ ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ತಮಿಳುನಾಡಿಗೆ KRS ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ ಕಾವೇರಿ ಕಿಚ್ಚು ಮುಂದುವರೆದಿದ್ದು, ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು. ವೇದಿಕೆ ಅಧ್ಯಕ್ಷ ಶಂಕರ್ ಬಾಬು
ನೇತೃತ್ವದಲ್ಲಿ ಬಿಸ್ಲೆರಿ ನೀರಿನಲ್ಲಿ ನಾಟಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ರೈತರ ಬೆಳೆಗಳಿಗೆ ನೀರು
ಕೊಡುತ್ತಿಲ್ಲ, ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ಆಕ್ರೋಶತರಾದ ರೈತರು, ಕಾರ್ಯಕರ್ತರು ಹನುಮಂತಪುರ ಗ್ರಾಮದ ಗದ್ದೆಯಲ್ಲಿ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರು ಇಲ್ಲದೆ ಭತ್ತದ ನಾಟಿ ಮಾಡಲು ಆಗುತ್ತಿಲ್ಲ, ಬಿಸ್ಲೆರಿ ನೀರಿನಲ್ಲಿ ನಾಟಿ ಮಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿ ಕೂಡಲೇ ನಿಲ್ಲಿಸಿ ರಾಜ್ಯ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿ ಗ್ರಾಮದ ರಾಮಚಂದ್ರು ಎಂಬುವವರ ಜಮೀನಿನಲ್ಲಿ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಭತ್ತದ ನಾಟಿ ಮಾಡಿ, ಬಿಸ್ಲೇರಿ ನೀರೆರೆದು ಪ್ರತಿಭಟನೆ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ