ಕೂದಲಿಗೆ ಕೆಂಪು ಬಣ್ಣ ಬಳಿದುಕೊಂಡು ಟ್ರೋಲ್ ಆದ ನಟಿ ಪರಿಣಿತಿ ಚೋಪ್ರಾ

ಶನಿವಾರ, 1 ಸೆಪ್ಟಂಬರ್ 2018 (13:58 IST)
ಮುಂಬೈ : ಇತ್ತೀಚೆಗಷ್ಟೇ ಸಿನಿಮಾ ಪ್ರಮೋಶನ್ ವೇಳೆ ತಾನು ಧರಿಸಿದ್ದ ಬಟ್ಟೆಯಿಂದಾಗಿ ಟ್ರೋಲ್ ಗೆ ಒಳಗಾದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಇದೀಗ ಕೂದಲ ವಿಚಾರದಲ್ಲಿ ಮತ್ತೆ ಟ್ರೋಲ್ ಗೆ ತುತ್ತಾಗಿದ್ದಾರೆ.


ಹೌದು. ನಟಿ ಪರಿಣಿತಿ ಚೋಪ್ರಾ ಕೂದಲಿಗೆ ಕೆಂಪು ಬಣ್ಣ ಬಳಿದುಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಇವರಿಗೆ ಈ ಕೂದಲು ಚೆನ್ನಾಗಿ ಕಾಣಿಸುತ್ತಿಲ್ಲ. ಇವರಿಗೆ ಈ ಕೂದಲು ಬೇಕಿತ್ತಾ? ‘ಕೆಂಪಿ’, ‘ಭೂತ’ ಎಂದು ಲೇವಡಿ ಮಾಡಿದ್ದಾರೆ.


ಅಷ್ಟಕ್ಕೂ ಪರಿಣಿತಿ ಚೋಪ್ರಾ ತಮ್ಮ  ಮುಂದಿನ ಸಿನಿಮಾ 'ಜಬ್ಬಾರಿಯಾ ಜೋಡಿ' ಚಿತ್ರದಲ್ಲಿ ಅಭಿನಯಿಸಲು ಈ ಅವತಾರ ತಾಳಿದ್ದಾರೆ. ಈ ರೀತಿ ಕೆಂಪು ಬಣ್ಣದ ಕೂದಲನ್ನು ಮಾಡಿಕೊಳ್ಳಬೇಕೆಂದು ಚಿತ್ರದ ನಿರ್ಮಾಪಕರು ಹೇಳಿದ್ದರಂತೆ. ಅದರ ಸಲುವಾಗಿ ತಾನು ತನ್ನ ಕೂದಲನ್ನು ಕೆಂಪು ಬಣ್ಣವಾಗಿ ಬದಲಾಯಿಸಿಕೊಂಡೆ ಎಂದು ನಟಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ