ಕುಡಿದ ಮತ್ತಿನಲ್ಲಿ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರಿಸಿದ ಭೂಪ!
ಪಾನಮತ್ತನಾಗಿದ್ದ ವ್ಯಕ್ತಿ ಮಹಿಳೆ ಕೂತಿದ್ದ ಸೀಟಿಗೆ ಮೂತ್ರಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಇದೀಗ ವಿಮಾನ ಯಾನ ಸಚಿವ ಜಯಂತ್ ಸಿನ್ಹಾ ತನಿಖೆಗೆ ಆದೇಶಿಸಿದ್ದಾರೆ.
ಇಂದ್ರಾಣಿ ಘೋಷ್ ಎಂಬ ಮಹಿಳೆ ಈ ಸಂಬಂಧ ನೇರವಾಗಿ ಸಚಿವರಿಗೆ ಟ್ವೀಟ್ ಮಾಡಿದ್ದು, ತನ್ನ ತಾಯಿ ಮೇಲೆ ಇಂತಹದ್ದೊಂದು ಅಸಭ್ಯ ವರ್ತನೆ ನಡೆದಿದೆ ಎಂದು ವಿಮಾನದ ಸಂಖ್ಯೆ ಸಮೇತ ದೂರಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಸಚಿವರು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.