ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ವಿಧಿವಶ
ಶೀರೂರು ಶ್ರೀಗಳ ಮೂಲ ನಾಮಮೂಲ ನಾಮ ಹರೀಶ್ ಆಚಾರ್ಯ. ವಿಠ್ಹಲ ಆಚಾರ್ಯ, ಕುಸುಮಾ ಆಚಾರ್ಯ ದಂಪತಿಯ ಪುತ್ರ. ಹೆಬ್ರಿ ತಾಲೂಕಿನ ಮಡಮಕ್ಕಿ ಶ್ರೀಗಳ ಮೂಲ ಮನೆಯಾಗಿತ್ತು. ಶ್ರೀಗಳು ಶಿರೂರು ಮಠದ 30ನೇ ಯತಿಗಳಾಗಿದ್ದರು. ಇವರು ಮೂರು ಪರ್ಯಾಯವನ್ನು ಪೂರೈಸಿದ್ದರು.
ಶೀರೂರು ಶ್ರೀಗಳು ಸಂಗೀತ ಪ್ರೇಮಿ ಕೂಡ ಹೌದು.ತಮ್ಮ ಹುಟ್ಟುಹಬ್ಬದದು ಖ್ಯಾತ ಡ್ರಮ್ಮರ್ ಶಿವಮಣಿ ಜತೆ ಸೇರಿ ಡ್ರಮ್ಸ್ ಬಾರಿಸಿದ್ದರು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದರು.ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದರು
ಕೊನೆ ಕ್ಷಣದಲ್ಲಿ ಚುನಾವಣಾ ಅಖಾಡದಿಂದ ಹಿಂದೆ ಸರಿದಿದ್ದರು.