ಪ್ರೀತಿ ಭಾಷೆಯಲ್ಲಿ ಒಂದಾದ ಕಾರವಾರದ ಹುಡುಗ, ರಷ್ಯಾದ ಹುಡುಗಿ

ಬುಧವಾರ, 11 ಜನವರಿ 2017 (07:57 IST)
ಅವರಿಬ್ಬರಿಗೂ ಮಾತು ಬರಲ್ಲ. ಕಿವಿಯೂ ಕೇಳಿಸಲ್ಲ. ದೇಶ ಬೇರೆ. ಸಂಪ್ರದಾಯ, ಸಂಸ್ಕೃತಿ ಬೇರೆ. ಆದರೆ ಅವರಿಬ್ಬರಲ್ಲಿ ಪ್ರೀತಿ ಮೂಡಲು ಇದ್ಯಾವುದೂ ಅಡ್ಡಿಯಾಗಲಿಲ್ಲ. ಇದು ಭಾರತದ ಹುಡುಗ ಮತ್ತು ರಷ್ಯಾದ ಯುವತಿಯ ಸುಂದರ ಪ್ರೇಮ ಕಥೆ.


 
ಉತ್ತರಕನ್ನಡದ ಜಿಲ್ಲಾ ಕೇಂದ್ರ ಕಾರವಾರದ ನಂದನಗದ್ದಾದ ಯುವಕ ಮೆಲ್ವಿನ್ ಬ್ರಿಟೋ ರುಜಾರಿಯಾ(28) ರಷ್ಯಾದ ಒಲೇಗ್ ಬುಷ್ಮಾಗಿಯಾ ಎಂಬ 20 ವರ್ಷದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದಾರೆ,
 
ಸದಾಶಿವಗಡದ ಕಲ್ಯಾಣ ಮಂಟಪದಲ್ಲಿ ಎರಡು ಕಡೆಯ ಬಂಧುಬಾಂಧವರ ಸಮ್ಮುಖದಲ್ಲಿ ಇಬ್ಬರ ವಿವಾಹ ಸಂಪನ್ನವಾಯಿತು.
ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಕೂಡ ಇವರ ವಿವಾಹ ನೋಂದಣಿಯಾಗಿದೆ.
 
ಹುಟ್ಟಿನಿಂದ ಮೂಕ-ಕಿವುಡರಾಗಿರುವ ಮೆಲ್ವಿನ್,  ಬೆಂಗಳೂರಿನ ಕಿವುಡ-ಮೂಕ ಶಾಲೆಯಲ್ಲಿ ಐಟಿಐ ಓದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಒಲೇಗ್ ಪರಿಚಯವಾಗಿತ್ತು. ಬಳಿಕ ಅದು ಪ್ರೇಮಕ್ಕೆ ತಿರುಗಿತು.
 
ಮತ್ತೀಗ ಎರಡು ಕಡೆ ಪೋಷಕರ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ