ಏರೋ ಇಂಡಿಯಾದಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗ ಭಾಗಿ

ಶನಿವಾರ, 11 ಫೆಬ್ರವರಿ 2023 (10:23 IST)
ಬೆಂಗಳೂರು : ಫೆಬ್ರುವರಿ 12ರಿಂದ 17ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2023 ಪ್ರದರ್ಶನದಲ್ಲಿ ಭಾರತದಲ್ಲಿನ ಯು.ಎಸ್. ಮಿಷನ್ನ ಚಾರ್ಜೆ ಡಿ ಅಫೇರ್ಸ್ ರಾಯಭಾರಿ ಎಲಿಜಬೆತ್ ಜೋನ್ಸ್ ಅವರು ಈವರೆಗಿನ ಅಮೆರಿಕದ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಿ ಪಾಲ್ಗೊಳ್ಳಲಿದ್ದಾರೆ.

ಅಮೆರಿಕ ವೈಮಾನಿಕ ಉದ್ಯಮ ಹಾಗೂ ಸೇನಾಪಡೆಯ ವಿಶ್ವ ದರ್ಜೆಯ ಉಪಕರಣಗಳು, ತರಬೇತಿ, ತಾಕತ್ತು ಹಾಗೂ ಜಂಟಿ ಅಭ್ಯಾಸದ ಸಾಮರ್ಥ್ಯಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಲು ನನಗೆ ಹೆಮ್ಮೆಯೆನಿಸುತ್ತಿದೆ.

ಭಾರತ ತನ್ನ ಸೇನಾ ಸಾಮರ್ಥ್ಯವನ್ನು ಆಧುನೀಕರಣಗೊಳಿಸುತ್ತಿರುವ ಸಮಯದಲ್ಲಿ ನಾವು ಐಚ್ಛಿಕ ಪಾಲುದಾರರಾಗಲು ಬಯಸುತ್ತೇವೆ. ಉಭಯ ದೇಶಗಳಿಗೂ ಲಾಭದಾಯಕವಾಗುವ ಜಂಟಿ ಉತ್ಪಾದನೆ ಹಾಗೂ ಜಂಟಿ ಅಭಿವೃದ್ಧಿಯ ಪಾಲುದಾರಿಕೆಯತ್ತ ನಾವು ಹೆಚ್ಚಿನ ಗಮನ ನೀಡುತ್ತಿದ್ದೇವೆ.

ಸುರಕ್ಷಿತವಾದ, ಸಮೃದ್ಧಿಯಾದ, ಅತ್ಯಂತ ಮುಕ್ತವಾದ ಹಾಗೂ ಸ್ವತಂತ್ರ ʻಇಂಡೋ -ಪೆಸಿಫಿಕ್ʼ ಪ್ರಾಂತ್ಯಕ್ಕಾಗಿ ನಾವು ಭಾರತವನ್ನು ಅತ್ಯಂತ ಪ್ರಮುಖ ಪಾಲುದಾರ ದೇಶವಾಗಿ ಪರಿಗಣಿಸುತ್ತೇವೆ ಎಂದು ಅಂಬಾಸಡರ್ ಜೋನ್ಸ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ