ರೈಲ್ವೆಗಾಲಿ ಮತ್ತು ಅಚ್ಚು ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷ

ಭಾನುವಾರ, 27 ಮಾರ್ಚ್ 2022 (20:17 IST)
ಬೆಂಗಳೂರಿನ ಯಲಹಂಕ ರೈಲ್ವೆಗಾಲಿ ಮತ್ತು ಅಚ್ಚು ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಸಂಚರಿಸ್ತಿರೋ ದೃಶ್ಯಗಲು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನ ಕಂಡ ಕಾರ್ಖಾನೆಯ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದ್ದು, ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಯಲಹಂಕ ವಲಯ ಅರಣ್ಯಾಧಿಕಾರಿಗಳು ಚಿರತೆ ಹಿಡಿಯಲು ಬೋನಿಟ್ಟು ಕಾರ್ಯಚರಣೆ ನಡೆಸ್ತಿದ್ದಾರೆ. ಕಾರ್ಖಾನೆಯ ಒಳಗೆ ಯಾವುದೇ ಸಿಬ್ಬಂದಿಯನ್ನು ಬಿಡದೆ ಪ್ರವೇಶಕ್ಕೆ ನಿರ್ಬಂಧ ಹೇರಿರುವ ರೈಲ್ವೆ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಚಿರತೆಯನ್ನ ಜೀವಂತವಾಗಿ ಹಿಡಿಯಲು ಸೂಕ್ತ ಸ್ಥಳಗಳಲ್ಲಿ ಬೋನುಗಳನ್ನಿಟ್ಟು ಶೋಧ ನಡೆಸ್ತಿದ್ದಾರೆ. ಇನ್ನು ಚಿರತೆಯ ಚಲನವಲನ ಬಗ್ಗೆ ಪರಿಶೀಲನೆ ನಡೆಸ್ತಿರೋ ಅಧಿಕಾರಿಗಳು ಸಿಂಗನಾಯಕನಹಳ್ಳಿ ಕೆರೆ ಹಾಗೂ ಯಲಹಂಕ ಕೆರೆಕೋಡಿಗಳ ಮೂಲಕ ಚಿರತೆ ರೈಲ್ವೆಗಾಲಿ ಕಾರ್ಖಾನೆಗೆ ಬಂದಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಯಲಹಂಕ ಪೊಲೀಸ್ರು ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದ್ದು, ಅರಣ್ಯಾಧಿಕಾರಿಗಳಿಂದ ಚಿರತೆ ಹಿಡಿಯುವ ಕಾರ್ಯ ಮುಂದುವರೆದಿದ್ದು, ಸ್ಥಳೀಯರಲ್ಲಿ ಆತಂಕ ಮನೆ  ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ