ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಚಿರತೆ ಆತಂಕ

ಭಾನುವಾರ, 15 ಜನವರಿ 2023 (11:23 IST)
ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಚಿರತೆ ಕಾಣಿಸಿಕೊಂಡಿದೆ ಅನ್ನೋ ಮಾತುಗಳು ಒಬ್ಬರಿಂದ ಒಬ್ಬರಿಗೆ ಹರಡಿ ಆತಂಕ ಸೃಷ್ಟಿಯಾಗಿದೆ.

ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಜಿಂಕೆ ಭೇಟೆಯಾಡಿದ ಬಳಿಕ ಬೆಂಗಳೂರು ಮತ್ತು ಬೆಂಗಳೂರಿನಹೊರವಲಯದಲ್ಲಿ ಚಿರತೆಗಳ ಸಂಚಾರವಾಗ್ತಿರೋ ಬಗ್ಗೆ ಅನೇಕ ಕಡೆ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಈಗ ಬೆಂಗಳೂರಿನ ಜ್ಞಾನ ಭಾರತಿ ಆವರಣದಲ್ಲಿ ಚಿರತೆ ಬಂದಿದೆ ಅನ್ನೋ ಕಾರಣಕ್ಕೆ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯೂನಿವರ್ಸಿಟಿಯಲ್ಲಿ ಪ್ರವೇಶ ಬಂದ್ ಮಾಡಲಾಗಿದೆ. ನಾಗರಭಾವಿಯಿಂದ ಕ್ಯಾಂಪಸ್ಗೆ ಸಂಪರ್ಕ ಕಲ್ಪಿಸೋ ರಸ್ತೆ ಬಂದ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ